ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘದ ಉದ್ಘಾಟನೆ

0

ಮಡಂತ್ಯಾರು: ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ (ರಿ.) ಮಡಂತ್ಯಾರು-ಪುಂಜಾಲಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ವರ್ತಕ ಬಂಧು ಸಹಕಾರ ಸಂಘವು ವರ್ತಕರಿಂದ ವರ್ತಕರಿಗಾಗಿ ವರ್ತಕರಿಗೋಸ್ಕರ ವರ್ತಕರೇ ಪ್ರವರ್ತಿಸಲ್ಪಡುವ ಮಡಂತ್ಯಾರು ವರ್ತಕ ಬಂದು ಸಹಕಾರ ಸಂಘವು ಅಸ್ತಿತ್ವಕ್ಕೆಬಂದಿದ್ದು ಇದರ ಉದ್ಘಾಟನಾ ಸಮಾರಂಭವು ಇಂದು ಜುಲೈ 9ರಂದು ನಡೆಯಿತು.

ಕಳೆದ 6 ವರ್ಷಗಳ ಹಿಂದೆ ಸಮಾನಮನಸ್ಕರು ಒಂದಾಗಿ ಒಟ್ಟು ಸೇರಿ ಮಡಂತ್ಯಾರು ಪುಂಜಾಲಕಟ್ಟೆ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘವು ಅಸ್ತಿತ್ವಕ್ಕೆ ಬಂದಿತ್ತು.ಇದರ ಅಧ್ಯಕ್ಷರಾಗಿ ಜಯಂತ ಶೆಟ್ಟಿ, ಕಾರ್ಯದರ್ಶಿಯಾಗಿ ತುಳಸಿದಾಸ್ ಪೈ ಹಾಗೂ ಹೆಚ್ಚಿನ ಎಲ್ಲಾ ವರ್ತಕರು ಇದರ ಸದಸ್ಯರಾಗಿ ಸಮಾಜಮುಖಿ ಕಾರ್ಯಕ್ರಮ ದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ವರ್ತಕರಿಗೆ ಮತ್ತು ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವನ್ನು ಹೊಂದಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಂಘದಲ್ಲಿ ಅಸೌಖ್ಯದಿಂದ ಮರಣ ಹೊಂದಿದ ಸಂಘದ ಸದಸ್ಯರ ಮನೆಯವರಿಗೆ ರೂ.10 ಸಾವಿರ ಆರ್ಥಿಕ ನೆರವು, ಮಡಂತ್ಯಾರು ಪಾಂಡವರಕಲ್ಲು ರಸ್ತೆ ಕಾಮಗಾರಿ ಖಾಸಗಿ ಪಟ್ಟ ಯಾಗದಲ್ಲಿದ್ದು ಅವರಿಗೆ ರೂ.50 ಸಾವಿರ ಪರಿಹಾರ ವಿತರಣೆ, ಪುಂಜಾಲಕಟ್ಟೆ ಮಡಂತ್ಯಾರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ವರ್ತಕರ ಸಂಘದ ಸದಸ್ಯರಿಗೆ ಸೇರಿದ ಜಾಗದ ಸರ್ವೆ ಮತ್ತು ಪರಿಹಾರ ವಿತರಣೆಗೆ ಸಹಕಾರ ನೀಡುವ ಭರವಸೆ. ಮಡಂತ್ಯಾರಿನ ಪೇಟೆಯಲ್ಲಿ ಸಾರ್ವಜನಿಕರಿಗೆ ಬಹಳಷ್ಟು ಉಪಯೋಗವಾಗುವ ಶಾಶ್ವತ ಬಸ್ಸು ತಂಗುದಾಣ ನಿರ್ಮಿಸಿದ್ದು ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿದೆ. ಇದರೊಂದಿಗೆ ತಮ್ಮದೇ ಆದ ಒಂದು ಸಹಕಾರಿ ಸಂಘ ಸ್ಥಾಪನೆ ಮಾಡುವ ಕನಸ್ಸು ನನಸಾಗುವ ಸುಸಂದರ್ಭವಿದು. ಈ ಸಂಘಕ್ಕೆ 17 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿರುತ್ತಾರೆ. ಈ ಸಂಘ ಸಹಕಾರಿ ಸಂಘಗಳ ಇಲಾಖೆಯ ನಿಬಂಧನೆಗೊಳ್ಳಪಟ್ಟು ಸಂಘವು ನೋಂದಾವಣೆ ಆಗಿರುತ್ತದೆ.

ಅಧ್ಯಕ್ಷರಾಗಿ ಜಯಂತ್ ಶೆಟ್ಟಿ, ಉಪಾಧ್ಯಕ್ಷರಾಗಿ ಯೋಗಿ‌ಶ್ ಕುಮಾರ್‌ ಕಡ್ತಿಲ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ವಂ.ಫಾ. ಸ್ಟ್ಯಾನಿ ಗೋವಿಯಸ್ ಅಶೀರ್ವಚನ ಮಾಡಿದರು.

ಬಿ.ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು, ಶಾಸಕ ಹರೀಶ್ ಪೂಂಜ ಕಛೇರಿ ಉದ್ಘಾಟನೆ ನೆರವೇರಿಸಿದರು.ಭದ್ರತಾ ಕೋಶ ಉದ್ಘಾಟನೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮುಡಾಯುರು ದೀಪ ಪ್ರಜ್ವಲನೆ ಮಾಡಿದರು.

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕ್ಯಾಶ್ ಸರ್ಟಿಕೆಟ್ ವಿತರಣೆ ಮಾಡಿದರು. ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.

ಉಪಾಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರ್, ನಿತ್ಯಾನಂದ ಹೆಗ್ಡೆ, ನಿರ್ದೇಶಕರುಗಳಾದ ವಿಜಯಚಂದ್ರ ಮಾಲಾಡಿ, ಉದಯಕುಮಾರ್ ಜೈನ್, ಕಾಂತಪ್ಪ ಗೌಡ, ಗಿರೀಶ್ ಪೈ, ಪ್ರಶಾಂತ್ ಶೆಟ್ಟಿ, ತುಳಸಿದಾಸ್ ಪೈ, ಯಶೋಧರ ಬಂಗೇರ, ಕಿಶೋರ್ ಶೆಟ್ಟಿ, ವಿನೋದ್ ಬಾಳಿಗ, ಹೈದರ್ ಬಿ., ಅಶೋಕ್ ಹೆಚ್, ಗೋಪಾಲಕೃಷ್ಣ ಕೆ., ಶ್ರೀಮತಿ ಡಿಗ್ನ ಮೊರಾಸ್, ಅಮಿತಾ ಲೋಬೊ, ತೆಲ್ಮಾ ಮಾಡ್ತಾರವರು, ಗೌರವ ಸಲಹೆಗಾರರಾದ ಅನಿಲ್ ಕುಮಾರ್ ಅಧಿಕಾರಿ ಪಿ.ಎನ್. ಅಧಿಕಾರಿ & ಸನ್ಸ್ ಮಡಂತ್ಯಾರು, ರವೀಂದ್ರ ಬಾಳಿಗ ಪುಂಡಲೀಕ ಬಾಳಿಗ & ಸನ್ಸ್ ಪುಂಜಾಲಕಟ್ಟೆ, ರತ್ನಾಕರ ಶೆಟ್ಟಿ ಅಮ್ಮ ಮೆಡಿಕಲ್ಸ್ ಮಡಂತ್ಯಾರು,ರಾಜೇಶ್ ರೋಡ್ರಿಗಸ್ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರುಶೇಖ್ ಜವಾಹರ್ ಆಲಿ, ಶಮಾ ಕಾಂಪ್ಲೆಕ್ಸ್, ಮಡಂತ್ಯಾರುವಾಸುದೇವ ಗೌಡ, ಅಕ್ಷಯಾ ಫುಡ್ಸ್, ಪುಂಜಾಲಕಟ್ಟೆ ಓಂ ಪ್ರಸಾದ್, ಪೂಜಾರಿ ವೈನ್ಸ್, ಪುಂಜಾಲಕಟ್ಟೆ ಜಯಪ್ರಕಾಶ್, ಅಶ್ವಿನಿ ಗ್ಲಾಸ್ & ಫೈವುಡ್, ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಬೇಬಿ ಸುಸಾನ ಅಧ್ಯಕ್ಷರು, ಮಾಲಾಡಿ ಗ್ರಾಮ ಪಂಚಾಯತ್, ಶಶಿಪ್ರಭ ಅಧ್ಯಕ್ಷರು ಗ್ರಾಮಪಂಚಾಯತ್ ಮಡoತ್ಯಾರು, ಬಿ. ವಿ. ಪ್ರತಿಮಾ ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ,ಮೋನಪ್ಪ ಪೂಜಾರಿ ಕಂಡತ್ಯಾರು ಸಹಕಾರಿ ಕ್ಷೇತ್ರದ ಮಾರ್ಗದರ್ಶಕರು ಮ್ಯಾಕ್ಸಿಂ ಕಾರ್ಲ್ ಅಧ್ಯಕ್ಷರು, ಸಮನ್ವಯ ವಿ.ಕೋ.ಸೊಸೈಟಿ, ಮಡಂತ್ಯಾರು ಅರವಿಂದ ಜೈನ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಮಡಂತ್ಯಾರು, ಲೆನ್ಸಿ ಪಿಂಟೊ ಅಧ್ಯಕ್ಷರು, ಸೇ. ಹಾ. ಸಹಕಾರಿ ಸಂಘ ಮಡಂತ್ಯಾರು, ಸುಭಾಶ್ಚಂದ್ರ ಜೈನ್ ಅಧ್ಯಕ್ಷರು ವರ್ತಕರ ವಿ.ಸ. ಸಂಘ ಬಂಟ್ವಾಳ, ಪುಷ್ಪರಾಜ್‌ ಶೆಟ್ಟಿ, ಅಧ್ಯಕ್ಷರು ವರ್ತಕರ ಸಂಘ ಬೆಳ್ತಂಗಡಿ, ಅರವಿಂದ್ ಕಾರಂತ್‌ ಅಧ್ಯಕ್ಷರು ವರ್ತಕರ ಸಂಘ ಉಜಿರೆ, ಡಾ. ಸೇರಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡೆಲ್ಸನ್ ಮೋನಿ, ಸಿಬ್ಬಂದಿಗಳಾದ ಭಾಗ್ಯಶ್ರೀ ಎಂ. ಮತ್ತು ಶ್ರಾವಣಿ ಸಹಕರಿಸಿದರು.

LEAVE A REPLY

Please enter your comment!
Please enter your name here