ಬೆಳಾಲು ಪ್ರೌಢಶಾಲೆಯ ಶಿಕ್ಷಕಿ ವಾರಿಜ.ಎಸ್ ಗೌಡರವರ ಸೇವಾನಿವೃತ್ತಿ- ಬೀಳ್ಕೊಡುಗೆ ಸಮಾರಂಭ

0

ಬೆಳಾಲು: ಉಜಿರೆ ಶ್ರೀ.ಧ.ಮಂ ಎಜ್ಯುಕೇಶನಲ್ ಸೊಸೈಟಿ ರಿ.ಇದರ ಆಡಳಿತಕ್ಕೊಳಪಟ್ಟ ಸಂಸ್ಥೆಯಾದ, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ 2001ರಿಂದ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದ ವಾರಿಜ.ಎಸ್ ಗೌಡರವರು ತನ್ನ ಇಪ್ಪತ್ತೆರಡು ವರ್ಷಗಳ ಸೇವಾವಧಿಯ ಬಳಿಕ ಇದೀಗ ನಿವೃತ್ತಿಯನ್ನು ಹೊಂದಿರುತ್ತಾರೆ.ಈ ಹಿನ್ನೆಲೆಯಲ್ಲಿ ಶಾಲಾ ವತಿಯಿಂದ ಶಿಕ್ಷಕರ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದವರ ಉಪಸ್ಥಿತಿಯಲ್ಲಿ ವಿದಾಯ ಸಮಾರಂಭ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ವಹಿಸಿದ್ದರು.

ನಿವೃತ್ತರ ಕುರಿತು ಶಿಕ್ಷಕರಾದ ಕೃಷ್ಣಾನಂದ, ರಾಜಶ್ರೀಯವರು, ಪೋಷಕ ಸಮಿತಿಯ ಅಧ್ಯಕ್ಷರಾದ ಶೇಖರ್ ಕೊಲ್ಲಿಮಾರು, ಹಳೆವಿದ್ಯಾರ್ಥಿ ಸಂಘದ ಗಣೇಶ್ ಕನಿಕ್ಕಿಲ, ವಿದ್ಯಾರ್ಥಿಗಳಾದ ಅಮೂಲ್ಯ,ಸಮೀಕ್ಷಾ, ಲೋಕೇಶ್ ಪೂಜಾರಿ, ತೀರ್ಥೇಶ, ನಿವೃತ್ತರ ಮಗಳು ಡಾ.ಶ್ವೇತಾರವರು ಅಭಿಪ್ರಾಯ ತಿಳಿಸಿದರು.

ನಿವೃತ್ತರಿಗೆ ವಿದ್ಯಾರ್ಥಿನಿಯರು ಬೆಳ್ಳಿದೀಪಾರತಿ ಬೆಳಗಿ, ಅರಶಿನ ಕುಂಕುಮ ಹಚ್ಚಿದರು.ನಂತರ ಎಲ್ಲರೂ ಸೇರಿ ಶಾಲು, ಮಾಲೆ, ಫಲತಾಂಬೂಲ ಸಮರ್ಪಿಸಿದರು.

ನಿವೃತ್ತರು ಸುದೀರ್ಘ ಸೇವಾವಧಿಯ ಅನುಭವವನ್ನು ನೆನಪಿಸಿಕೊಂಡು ಆಡಳಿತ ಮಂಡಳಿಯವರಿಗೆ, ಪೋಷಕರಿಗೆ, ಬೆಳಾಲು ಗ್ರಾಮದ ಜನತೆಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ವಿಜ್ಞಾನ ಶಿಕ್ಷಕಿಯಾಗಿ ಆಡಳಿತ ಮಂಡಳಿಯಿಂದ ಆಗಮಿಸಿದ್ದ ಕು.ಕೋಕಿಲಾ ಸಮಣಾಲುರವರಿಗೆ ಸ್ವಾಗತ ಕೋರಲಾಯಿತು.

ಶಿಕ್ಷಕರಾದ ಗಣೇಶ್ವರ್ ಸ್ವಾಗತಿಸಿ, ಜಗದೀಶ್ ಎನ್ ವಂದಿಸಿದರು, ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಸಿಹಿತಿಂಡಿ, ಪಾನೀಯ ವಿತರಣೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here