


ಕಳೆಂಜ: ಜೂ.15 ರಂದು ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶ್ರೀಮತಿ ಹೊನ್ನಮ್ಮ ಕೆ , ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಎ.ಪಿ, ಕಾರ್ಯದರ್ಶಿ ಹೊನ್ನಪ್ಪ ಗೌಡ, ಸದಸ್ಯರಾದ ಹರೀಶ ಕೆ.ಬಿ, ಲliತಾಕ್ಷಿ, ಕುಸುಮ.ಬಿ, ಮಮತಾ ಎಲ್.ಕೆ, ಮೀನಾಕ್ಷಿ ಎಸ್, ವಿಶ್ವನಾಥ ಎಚ್, ಗಂಗಾಧರ ಕೆ, ಮಮತಾ, ಸಮುದಾಯ ಆರೋಗ್ಯ ಅಧಿಕಾರಿ ಅಂಬಿಳಿ ನಿಖಿತಾ, ಆಶಾ ಕಾರ್ಯಕರ್ತೆಯರಾದ ರೇವತಿ ಕೆ, ದೇವಕಿ, ರೇವತಿ, ಪ್ರೇಮ ಎಸ್, ಅಂಗನವಾಡಿ ಕಾರ್ಯಕರ್ತೆಯರು ಸಂಜೀವಿನಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.