ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಎಸ್ ಡಿ ಎಮ್ ಇ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಜೊತೆಯಾಗಿ ಸ್ಥಾಪಿಸಿರುವ ರುಡ್ಸೆಟ್ ಸಂಸ್ಥೆ ಇದೀಗ ದೇಶಾದ್ಯಂತ ಇರುವ ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ-ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ವಿವಿದ ಬ್ಯಾಂಕುಗಳಿಂದ ರುಡ್ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ-ಉದ್ಯೋಗ/ಉದ್ಯೋಗಳನ್ನು ಕಲ್ಪಿಸಿ ಕೊಡಲಾಗುತ್ತದೆ. ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಮುಂದಿನ ಸೆಪ್ಟಂಬರ್ ತಿಂಗಳವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ:
1. ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಜೂ. 13 ರಿಂದ ಜೂ.22ರವರೆಗೆ (10 ದಿನಗಳು)
(ಹಸು ಸಾಕಾಣಿಕೆ)
2. ಸಿಸಿ ಕೆಮರಾ ಅಳವಡಿಸುವಿಕೆ ದುರಸ್ಥಿ ಜೂ. 16 ರಿಂದ ಜೂ.28 ರವರೆಗೆ (13 ದಿನಗಳು)
3. ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಜೂ. 22 ರಿಂದ ಜೂ. 21 (30 ದಿನಗಳು)
4. ಮೆನ್ಸ್ ಪಾರ್ಲರ್ ಮೆನೇಜ್ಮೆಂಟ್(ಪುರುಷರಿಗೆ) ಜು. 03 ರಿಂದ ಆ. 01 ರವರೆಗೆ (30 ದಿನಗಳು)
5. ಮಹಿಳೆಯರ ವಸ್ತ್ರ ವಿನ್ಯಾಸ (ಟೈಲರಿಂಗ್) ಆ.02. ರಿಂದ ಆ.31 ರವರೆಗೆ (30 ದಿನಗಳು)
6. ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಆ. 07 ರಿಂದ ಸೆ.05 ರವರೆಗೆ (30 ದಿನಗಳು)
7. ಬ್ಯೂಟಿ ಪಾರ್ಲರ್ ಮೆನೇಜ್ಮೆಂಟ್(ಮಹಿಳೆಯರಿಗೆ) ಸೆ.01 ರಿಂದ ಸೆ.30 ರವರೆಗೆ (30 ದಿನಗಳು)
ಈ ತರಬೇತಿಗಳು ನಡೆಯಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಜೇನು ಕೃಷಿ, ಎಸಿ ಮತ್ತು ಫ್ರಿಡ್ಜ್ ರಿಪೇರಿ, ಮೊಬೈಲ್ ಫೋನ್ ರಿಪೇರಿ, ಕೃತಕ ಆಭರಣ ತಯಾರಿಕೆ, ಉದ್ಯಮಶೀಲತಾ ಅಭಿವೃದ್ಧಿ ತರಬೇತಿ, ಕಂಪ್ಯೂಟರ್ ಹಾರ್ಡ್ ವೇರ್, ವಿದ್ಯುತ್ ಉಪಕರಣಗಳ ರಿಪೇರಿ, ಕಂಪ್ಯೂಟರೈಸಡ್ ಅಕೌಂಟಿಂಗ್ (ಟ್ಯಾಲಿ), ಕೋಳಿ ಸಾಕಾಣಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಭ್ಯರ್ಥಿಗಳು18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕರು/ಯುವತಿಯರು ಅರ್ಜಿಯನ್ನು ಸಂಸ್ಥೆಯ ವೆಬ್ಸೈಟ್ನಲ್ಲಿ(www.rudsetujire.com,www.rudsetitraining.org), ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ.636456192ಗೆ ಸಲ್ಲಿಸಬಹುದು. ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು : ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ-574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಅಥವಾ 9591044014, 9902594791, 9980885900, 9900793675ಗೆ ಸಂಪರ್ಕಿಸಬಹುದು.