ಕೊಕ್ಕಡ :ಉಜಿರೆ ಹವ್ಯಕ ವಲಯ, ಶ್ರೀರಾಮ ಸೇವಾ ಟ್ರಸ್ಟ್ ರಿ.ಕೊಕ್ಕಡ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ, ಕನ್ಯಾಡಿ ಸೇವಾಭಾರತಿ ಸಂಯೋಜನೆಯಲ್ಲಿ ಪುತ್ತೂರು ರೋಟರಿ ಕ್ಯಾಪ್ಕೊಂ ಬ್ಲಡ್ ಸೆಂಟರ್ ನಿಂದ ಕೊಕ್ಕಡ ಶ್ರೀರಾಮ ಸೇವಾ ಮಂದಿರದಲ್ಲಿ ಮೇ.28 ರಂದು ನಡೆದ ರಕ್ತ ಶಿಬಿರದಲ್ಲಿ 45 ಯೂನಿಟ್ ರಕ್ತ ಸ್ವಯಂಪ್ರೇರಿತ ದಾನಿಗಳಿಂದ ಸಂಗ್ರಹಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಲಡ್ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ “ರಕ್ತದ ತೀವ್ರ ಕೊರತೆ ಪ್ರಸ್ತುತ ಬ್ಲಡ್ ಸೆಂಟರ್ ಗಳಲ್ಲಿದ್ದು ಎಲ್ಲ ಆರೋಗ್ಯವಂತರೂ ರಕ್ತದಾನಿಗಳಾಗುವಂತೆ ಮನವಿ ಮಾಡಿದರಲ್ಲದೆ ಪುತ್ತೂರು ಬ್ಲಡ್ ಸೆಂಟರ್ ನಲ್ಲಿ ಲಭ್ಯವಿರುವ ಸೇವೆಗಳ ವಿವರ ನೀಡಿದರು.
ಸಮಾಜ ಸೇವಕ ಹಾಗೂ ಶಿಬಿರದ ಪ್ರಥಮ ರಕ್ತದಾನಿ ಶl ಜನಾರ್ಧನ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.
ವೇದಿಕೆಯಲ್ಲಿ ಕೊಕ್ಕಡ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ, ಕನ್ಯಾಡಿ ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಗ್ರಾ.ಪಂ ಅಧ್ಯಕ್ಷ ಯೋಗೀಶ ಆಲಂಬಿಲ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕು. ಸಮನ್ವಿತಾ ಲಕ್ಷ್ಮಿ ಪ್ರಾರ್ಥಿಸಿದರು.ಡಾ.ಗಣೇಶ್ ಪ್ರಸಾದ್ ನಿರೂಪಿಸಿದರು.ಹಿತ್ತಿಲು ಶಿವರಾಮ ಭಟ್ ಸ್ವಾಗತಿಸಿ ಬೆಳ್ತಂಗಡಿ ರೋಟರಿ ನಿಯೋಜಿತ ಕಾರ್ಯದರ್ಶಿ ವಿದ್ಯಾ ಕುಮಾರ್ ಕಂಚೋಡು ವಂದಿಸಿದರು.
ಶಿಬಿರಕ್ಕೆ ಬೆಳ್ತಂಗಡಿ ರೋಟರಿ ಕ್ಲಬ್, ಕೊಕ್ಕಡ ಪ್ರಾ ಕೃ.ಪ.ಸ ಸಂಘ, ಶ್ರದ್ದಾ ಗೆಳೆಯರ ಬಳಗ, ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಕಿರಣ್ ಅಗ್ರೋ ಟೆಕ್, ಸೌತಡ್ಕ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ , ವಿಶ್ವ ಹಿಂದೂ ಪರಿಷತ್ , ಹಿಂದೂ ಆಟೋ ಚಾಲಕ ಮಾಲಕ ಸಂಘ , ಮಹಾಗಣಪತಿ ಸೇವಾ ಟ್ರಸ್ಟ್ ರಿ. ಸೌತಡ್ಕ ಕೈಜೋಡಿಸಿದ್ದವು.