ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಹೊಸ ವಿಧಾನ ಮತ್ತು ಬೋಧನಾ ತಂತ್ರಗಳ ಕುರಿತು ಕಾರ್ಯಗಾರ

0

ಉಜಿರೆ:ಬದಲಾಗುತ್ತಿರುವ ವರ್ತಮಾನದಲ್ಲಿ ವಿದ್ಯಾರ್ಥಿಗಳ ಮನೋಭಾವಕ್ಕೆ ಅನುಗುಣವಾಗಿ ಹೊಸ ವಿಧಾನ ಮತ್ತು ಬೋಧನಾ ತಂತ್ರಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಮೇ.4ರಂದು ಶಿಶುವಿಹಾರದ ಶಿಕ್ಷಕರಿಗೆ ಆಯೋಜಿಸಲಾಗಿತ್ತು.

ಈ ಕಾರ್ಯಾಗಾರವನ್ನು ಶ್ರಿ.ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸತೀಶ್ಚಂದ್ರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಆವೆ ಮಣ್ಣಿನ ತರಹ.ಏನನ್ನು ಎಸೆದರೂ ಅದು ಗಟ್ಟಿಯಾಗಿ ಕುಳಿತು ಬಿಡುತ್ತದೆ.ಭವ್ಯ ಭಾರತದ ನಿರ್ಮಾಣ ಶಾಲಾ ವರ್ಗಕೊಣೆಯಲ್ಲಿ ನಡೆಯತ್ತದೆ.ಶಿಕ್ಷಕರು ಆವೆ ಮಣ್ಣಿನ ಮೂರ್ತಿಯನ್ನು ತಿದ್ದಿ ತೀಡಿ ಸುಂದರ ರೂಪು ಕೊಡುವವರಾಗಿರುತ್ತಾರೆ.ಬದಲಾಗುವ ಹೊಸತನಕ್ಕೆ ನಾವೂ ಒಗ್ಗಿಕೊಳ್ಳಬೇಕು.ಹೊಸ ಹೊಸ ವಿಧಾನ ಚಟುವಟಿಕೆಯ ಬಾಣ ನಮ್ಮ ಬತ್ತಳಿಕೆಯಲ್ಲಿ ಇದ್ದರೆ ಮಾತ್ರ ನಮ್ಮೆಡೆಗೆ ಆಕರ್ಷಿತರಾಗಿರುತ್ತಾರೆ.ಆ ಶಕ್ತಿ ನಮಗಿರಲು ಇಂತಹ ಕಾರ್ಯಾಗಾರ ಉತ್ತಮ ಅವಕಾಶ.ಜ್ಞಾನ ಕಳೆದು ಹೋದ ಸೊತ್ತು ಎಲ್ಲೇ ಸಿಕ್ಕರೂ ಹೆಕ್ಕಿಕೊಂಡು ವೃತ್ತಿ ಧರ್ಮ ಸರಿಯಾಗಿ ನಿಭಾಯಿಸಿ ಎಂದು ಶುಭ ಹಾರೈಸಿದರು.

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆ(ಸಿಬಿಎಸ್ಸಿ)ಇದರ ಮುಖ್ಯೋಪಾಧ್ಯಾಯರಾದ ಶ್ರೀಯತ ಮನಮೋಹನ್ ನಾಯಕ್ ಇವರು ಬಂದಂತಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.ಶ್ರೀಮತಿ ಜಿಜಿ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಕಾರ್ಯಾಗಾರವನ್ನು ಜಾಹ್ನವಿ ಕಿಡ್ಸ್ ವರ್ಲ್ಡ್ ಎಂಬ ಸಂಸ್ಥೆಯ ಸ್ಥಾಪಕರಾಗಿರುವ ಶ್ರೀಮತಿ ಲಕ್ಷ್ಮೀ ಗುರುದತ್ ಪೈ ಇವರು ವಿವಿಧ ಚಟುವಟಿಕೆ ಹಾಗೂ ಆಧುನಿಕ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಪಾಠದೆಡೆಗೆ ಕೊಂಡೊಯ್ಯುವ ವಿಚಾರವನ್ನು ತಿಳಿಯಪಡಿಸಿದರು. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಶುವಿಹಾರ ಶಾಲೆಯ ಶಿಕ್ಷಕರು ಹಾಗೂ ಕೆಲವು ಪ್ರಾರ್ಥಮಿಕ ಶಾಲಾ ಶಿಕ್ಷಕರು ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here