



ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೋಟರಿ ಸೌಧದಲ್ಲಿ ಎ.19ರಂದು ಇಫ್ತಾರ್ ಕೂಟ ಆಚರಿಸಲಾಯಿತು.
ರೊ.ಡಾ.ಪ್ರದೀಪ್ ನಾವೂರು ರಂಜಾನ್- ಸೌಹಾರ್ದತೆಯ ಸಂಕೇತ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.ಎಲ್ಲಾ ಧರ್ಮಗಳಲ್ಲಿರುವ ಭಾವೈಕ್ಯತೆಯ ಮೌಲ್ಯಗಳ ಬಗ್ಗೆ ಅವರು ವಿಶ್ಲೇಷಿಸಿದರು.
ನಡ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯಾಕೂಬ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಷರೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.



ರೋಟರಿ ಕ್ಲಬ್ ಅಧ್ಯಕ್ಷೆ ರೊ.ಮನೋರಮಾ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ ರೊ.ರಕ್ಷಾ ರಾಗ್ನೀಶ್, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೊ.ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್, ಕ್ಲಬ್ ನ ಪೂರ್ವಾಧ್ಯಕ್ಷರುಗಳು, ನಿಯೋಜಿತ ಅಧ್ಯಕ್ಷ ರೊ.ಅನಂತ ಭಟ್ ಮಚ್ಚಿಮಲೆ, ಸದಸ್ಯರುಗಳು, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಅಣ್ಣಿ ಪೂಜಾರಿ ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








