



ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕೊಯ್ಯೂರು ಗ್ರಾಮದ ಮಲೆಬೆಟ್ಟು ನೀರಕಜೆ ಮನೆಯ ಸೋಮ ಮತ್ತು ಜಾನಕಿ ದಂಪತಿಯ ಪುತ್ರನಾಗಿರುವ ಮಹೇಶ್ ಅಟೋ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಡತನದ ಹಿನ್ನಲೆಯ ಕುಟುಂಬದಿಂದ ಬಂದಿರುವ ಅವರು ವಿದ್ಯಾಭ್ಯಾಸದ ಬಳಿಕ ಮೂಡಿಗೆರೆ ಬಸ್ಕಲ್, ಅಂಡಿಂಜೆ, ಪ್ರಸ್ತುತ 7 ವರ್ಷಗಳಿಂದ ಕೊಯ್ಯೂರು ಮಲೆಬೆಟ್ಟು ಹೀಗೆ ಒಟ್ಟು11 ವರ್ಷಗಳಿಂದ ಅಟೋ ಚಾಲಕನಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ.


ವೃತ್ತಿಯ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಸೇವಾ ರೂಪದಲ್ಲಿ ಪ್ರಯಾಣ ವ್ಯವಸ್ಥೆ, ಊರಿನ ಎಲ್ಲಾ ಸಾಮಾಜಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಅವರ ನಾಮಪತ್ರದ ವೇಳೆ ಸುಂದರ (ಮುನ್ನ), ಗಿರೀಶ್, ಸುನಿಲ್ ಮತ್ತು ಚಂದ್ರ ಇವರು ಉಪಸ್ಥಿತರಿದ್ದರು.








