ಮಚ್ಚಿನ‌ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಲು ಆಗ್ರಹ

0

ಮಚ್ಚಿನ: ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡದ ವ್ಯವಸ್ಥೆ ಆಗಬೇಕು ಎಂದು ಆಗ್ರಹ ವ್ಯಕ್ತವಾಗಿದೆ.
ಸ್ವಂತ ಕಟ್ಟಡ ಇಲ್ಲದೆ ಆರೋಗ್ಯ ಕೇಂದ್ರ ಗ್ರಾಮ ಪಂಚಾಯತಿಯ ಕಿರಿದಾದ ಕೋಣೆಯಲ್ಲಿ ಕಾರ್ಯ ನಿರ್ವಸುತ್ತಿದೆ. ಪ್ರತಿದಿನ ವೃದ್ಧರು, ಬಾಣಂತಿಯರು ಸೇರಿದಂತೆ ನೂರಾರು ಜನರು ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು ಚಿಕಿತ್ಸೆ ಪಡೆಯಲು ಎಲ್ಲೆಂದರಲ್ಲಿ ನಿಂತುಕೊಳ್ಳಬೇಕಿದೆ. ವಿವಿಧ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳಿಂದ ಚಿಕಿತ್ಸೆಗೆ ಬಳಸಲು ಸೌಕರ್ಯಗಳು ಸಿಕ್ಕಿದರೂ ಇಡಲು ಜಾಗವಿಲ್ಲದೆ ಪರದಾಡುವಂತಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಶೀಘ್ರದಲ್ಲಿ ವ್ಯವಸ್ಥೆ ಆಗಬೇಕಿದೆ ಮತ್ತು ಗ್ರಾಮದ ಜನರಿಗೆ ಉತ್ತಮವಾದ ಆರೋಗ್ಯ ಕೇಂದ್ರ ನಿರ್ಮಿಸಲು ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ ಎಂದು ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here