





ಪತ್ರಿಕಾ ಗೋಷ್ಠಿ
ಬೆಳ್ತಂಗಡಿ :ಕಣಿಯೂರು ಗ್ರಾಮದ ಸರ್ವೆ ನಂ.113 ಜಾಗದ ಬಗ್ಗೆ ಮಾಜಿ ಸೈನಿಕ ಚಂದಪ್ಪ ಗೌಡರು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸರ್ವೋದಯ ಕರ್ನಾಟಕ ಪಕ್ಷದ ವಿಧಾನ ಸಭಾ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ಹೇಳಿದರು.


ಅವರು ಮಾ.24 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಣಿಯೂರು ಗ್ರಾಮದಲ್ಲಿ 50 ವರ್ಷಗಳ ಹಿಂದಿನಿಂದ ತಂದೆ ಮತ್ತು ಕುಟುಂಬದವರು ಇಲ್ಲಿ ವಾಸ ಮಾಡಿ ಕೃಷಿ ಚಟುವಟಿಕೆ ಮಾಡುತ್ತಾ ಬರುತ್ತಿದ್ದು ಇದಕ್ಕೆ ಸಂಬಂಧ ಪಟ್ಟ ಕುಮ್ಕಿ ಜಾಗವನ್ನೆ ಮಾಜಿ ಸೈನಿಕರು ಕೇಳುತ್ತಿರುವುದು ತಪ್ಪು ಈ ಬಗ್ಗೆ ನ್ಯಾಯಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ ಇದೆ ಜಾಗ ಕೇಳುವುದು ಸರಿ ಅಲ್ಲ ಅವರ ಗ್ರಾಮ ಮೊಗ್ರುನಲ್ಲಿ ಕೇಳಬಹುದು, ಅಲ್ಲಿದೆ ಅವರು ಬಡವರು ಎಂದು ಹೇಳಿದ್ದಾರೆ ಆದರೆ ಅವರ ಹೆಸರಲ್ಲಿ ಹೆಬ್ರಿಯಲ್ಲಿ ಹೆಚ್. ಪಿ. ಗ್ಯಾಸ್ ವಿತರಣೆ ಕೇಂದ್ರ, ಪಡೀಲ್ ನಲ್ಲಿ ಸೈಟ್, ಇತರ ಕಡೆ ಜಾಗ ಇದೆ. ಈಗ ನಾನು ವಿಧಾನ ಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಇತರರ ಬೆಂಬಲದಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಶಂಕರ ಪುಣಚ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಆದಿತ್ಯ ನಾರಾಯಣ ಕೊಲ್ಲಾಜೆಯವರನ್ನು ಆಯ್ಕೆ ಮಾಡಿದ್ದು ಇವರ ಆತ್ಮದೈರ್ಯ ಕುಂದಿಸುವ ಆರೋಪಗಳನ್ನು ಆಡಳಿತ ನಡೆಸುತ್ತಿರುವ ಪಕ್ಷದ ಕುಮ್ಮಕ್ಕುನಿಂದ ಮಾಡಲಾಗಿದೆ. ಯುವ ನಾಯಕ ನವ ಬೆಳ್ತಂಗಡಿ ಮತ್ತು ಭ್ರಷ್ಟಾಚಾರದ ಮತ್ತು ಸುಳ್ಳು ಕಾಮಗಾರಿಗಳ ವಂಚನೆ ಮತ್ತು ಕಳಪೆಯ ವಿಷಯಗಳನ್ನು ಗ್ರಾಮಗಳ ಭೇಟಿ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಅವರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಒಸ್ವಾಲ್ಡ್ ಫೆರ್ನಾಂಡಿಸ್, ರಾಜ್ಯ ಸಮಿತಿ ಸದಸ್ಯ ಸನ್ನಿ ಡಿಸೋಜಾ, ಬೆಳ್ತಂಗಡಿ ಸಮಿತಿ ಅಧ್ಯಕ್ಷ ಅವಿನಾಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವಪ್ಪ ನಾಯ್ಕ, ರಾಮಣ್ಣ ವಿಟ್ಲ ಸಂದೀಪ್, ಇತರರು ಉಪಸ್ಥಿತರಿದ್ದರು.








