ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ: ಆಡಳಿತ ಪಕ್ಷದ ಅಸಮರ್ಪಕ ಆಡಳಿತ ಖಂಡಿಸಿ ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗ

0

ಬೆಳ್ತಂಗಡಿ: ಅಧಿಕಾರಕ್ಕೆ ಬಂದ ಪಟ್ಟಣ ಪಂಚಾಯತ್ ಆಡಳಿತ ಕಳೆದ ನಾಲ್ಕುವರೆ ವರ್ಷಗಳ ಹಿಂದೆ ನಗರ ಪಂಚಾಯತ್ ಗೆ ವಿಶೇಷ ಅನುದಾನದಲ್ಲಿ 33 ಕಾಮಗಾರಿಗಳಿಗೆ 10 ಕೋಟಿ ಅನುದಾನ ಮಂಜೂರಾಗಿದ್ದು ಇದರಲ್ಲಿ ಇನ್ನು 5.35 ಕೋಟಿ ಅನುದಾನದ ಕಾಮಗಾರಿ ಬಾಕಿಯಾಗಿದ್ದು ಇದನ್ನು ಅನುಷ್ಠಾನಗೊಳಿಸುವಂತೆ ಹಲವಾರು ಮಾಸಿಕ ಸಭೆಯಲ್ಲಿ ನಿರ್ಣಯಿಸಿದರೂ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ,ಇದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಇದರಿಂದ ಜನರಿಗೆ ಉತ್ತರಕೊಡಲು ಸಾಧ್ಯವಿಲ್ಲ ಅಲ್ಲದೆ ಮಂಜೂರಾದ ಅನುದಾನವನ್ನು ಇಂಜಿನಿಯರ್ ಸಭೆಯ ಗಮನಕ್ಕೆ ತರದೆ ಬೇರೆ ಕಾಮಗಾರಿಗೆ ವರ್ಗಾಯಿಸಿದ್ದಾರೆ ಇದು ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸದಸ್ಯ ಜಗದೀಶ್ ಡಿ. ಖಂಡಿಸಿದರು.

ಬಳಿಕ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯು ಫೆ.27 ರಂದು ಪಟ್ಟಣ ಪಂಚಾಯತ್ ಅದ್ಯಕ್ಕೆ ರಜನಿ ಕುಡ್ವರವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್, ರಾಜಶ್ರಿ ರಮಣ್ ಹಾಗೂ ಇತರರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here