ಬೆಳ್ತಂಗಡಿ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸುಬ್ರಹ್ಮಣ್ಯ ನಗರ ಲಾಯಿಲ ಬೆಳ್ತಂಗಡಿ ಸಾರ್ಥಕ 25 ವರ್ಷಗಳ ಸೇವೆ ನೀಡಿದ್ದು ಸಭಾದ ಬೆಳ್ಳಿ ಹಬ್ಬದ ಅಂಗವಾಗಿ ದಕ್ಷಿಣಾಮ್ನಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ಮಜ್ಜಗದ್ಗುರು ಭಾರತಿ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಫೆ.25 ರಂದು ಕಾರ್ಯಕ್ರಮದ ಉದ್ಘಾಟನೆಯು ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಜರಗಿತು. ಸಭಾಧ್ಯಕ್ಷತೆಯನ್ನು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ಪಿ. ರಾಧಾಕೃಷ್ಣ ರಾವ್ ಧರ್ಮಸ್ಥಳ ವಹಿಸಿದ್ದರು.
ಶೃಂಗೇರಿ ಶಾಖಾ ಮಠ ಕೋಟೆಕಾರ್ ನ ಧರ್ಮಾಧಿಕಾರಿ ಬಿ. ಸತ್ಯಶಂಕರ ಬೊಳ್ಳಾವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಡಿ ವೈ ಎಸ್ ಪಿ,ಕೆ. ಎಲ್. ರಾವ್, ಮಂಗಳೂರು ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲದ ಅಧ್ಯಕ್ಷ ದೇವಾನಂದ ಭಟ್,ರಜತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪಿ. ಲಕ್ಷ್ಮೀನಾರಾಯಣ ರಾವ್, ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್, ರೇಖಾ ಸುಧೀರ್ ರಾವ್, ಕೋಶಾಧಿಕಾರಿ ಮಿಥುನ್ ರಾವ್, ಉಪಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ರಾವ್, ಪ್ರಶಾಂತ್, ಶಿವಾನಂದ ರಾವ್,ಮಹಿಳಾ ವೇದಿಕೆ ಅಧ್ಯಕ್ಷೆ ಮಮತ ರಾವ್, ಕಾರ್ಯದರ್ಶಿ ನಿಶಾ ವಿಶ್ವನಾಥ್, ಯುವ ವೇದಿಕೆ ಅಧ್ಯಕ್ಷ ಪವನ್ ರಾವ್, ಕಾರ್ಯದರ್ಶಿ ನಿತಿನ್ ರಾವ್ ಉಪಸ್ಥಿತರಿದ್ದರು.ಎಲ್ಲಾ ವಲಯಗಳ ಪದಾಧಿಕಾರಿಗಳು, ಸದಸ್ಯರು, ಸ್ಥಾನಿಕ ಬಂಧುಗಳು ಹಾಜರಿದ್ದರು
ಈ ಸಂದರ್ಭದಲ್ಲಿ ರಜತ ಸಂಚಿಕೆ ಬಿಡುಗಡೆಗೊಳಿಸಲಾಯಿತು , ಸಭಾದ ಸ್ಥಾಪಕ ಪದಾಧಿಕಾರಿಗಳಿಗೆ ಸನ್ಮಾನ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೆ.26 ರಂದು ಬೆಳಿಗ್ಗೆ ಗಣಹೋಮ, ನಂತರ ಸಭಾದ ವಿವಿಧ ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಮಧ್ಯಾಹ್ನ ರಜತ ಮಹೋತ್ಸವದ ಸಮಾರೋಪ ಸಮಾರಂಭ ಜರಗಲಿದೆ. ಅತಿಥಿಗಳಾಗಿ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ಬ್ರಹ್ಮಶ್ರೀ ವಾಗೇಶ್ ಶಾಸ್ತ್ರಿ, ಮಂಗಳೂರು ಸಭಾದ ಅಧ್ಯಕ್ಷ ಕ್ಯಾದಿಗೆ ಹರ್ಷ ಕುಮಾರ್, ಬ್ರಹ್ಮಾವರ ಬಾರ್ಕೂರು ಶ್ರೀ ಜ್ಞಾನ ಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸವಿತಾ ಎರ್ಮಳ್, ನವೀನ್ ಚಂದ್ರ ರಾವ್ ಬೆಂಗಳೂರು ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ.