ಮಿತ್ತಬಾಗಿಲು: ಇತಿಹಾಸ ಪ್ರಸಿದ್ಧ ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ| ಮೂ| ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಫೆ.18 ರಂದು ನಡೆಯಿತು. ಬೆಳಿಗ್ಗೆ ಗಣಹೋಮ, ತೋರಣ ಮುಹೂರ್ತ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಹರೀಶ್ ಅರಮನೆ ಹಿತ್ಲು ನೆರವೇರಿಸಿದರು.
ವೇದಿಕೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ್ ರಾವ್ ಕೊಲ್ಲಿಪಾಲು, ಕಾರ್ಯದರ್ಶಿ ಚಂದ್ರಶೇಖರ ಮಾಪಲ್ದಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ವಕೀಲರು ಬಿ.ಕೆ. ಧನಂಜಯ ರಾವ್, ಆಲಂಗಾವು ಗೋಪಾಲಕೃಷ್ಣ ಗೌಡ, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ವಾಸುದೇವ ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವರಿಗೆ ವಿಶೇಷ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು. ಉಜಿರೆಯ ದಿಶಾ ಬೇಕರಿಯ ದಿನೇಶ್ ದಂಪತಿಗಳ ಸೇವಾರೂಪದಲ್ಲಿ ರಂಗಪೂಜಾಧರಿ, ಬಿ.ಕೆ. ಸುಬ್ಬರಾವ್ ಕುದ್ರೋಳಿ ಇವರು ಪುಷ್ಪಕನ್ನಡಿಗೆ ಬೆಳ್ಳಿ ಕವಚ, ಅಭಿಲಾಶ್ ಉತ್ಸವದ ಪಕ್ಕಿನಿಶಾನೆಯ ಕೊಡುಗೆ ನೀಡಿದ್ದಾರೆ. ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ನಂತರ ಬೆಂಗಳೂರಿನ ಕುಮಾರಿ ಪ್ರಣವಿ ಬೇರಿಕೆ ಮತ್ತು ತಂಡದವರಿಂದ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು.
ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ಡಾ. ಹರೀಶ್ ವಿಶೇಷ ಯೋಜನೆಯ ರೂ.500 ನಿತ್ಯ ಪೂಜೆಯ ಕೂಪನ್ ಬಿಡುಗಡೆಗೊಳಿಸಿದರು.