ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಹೊರೆಕಾಣಿಕೆ ಸಮರ್ಪಣೆ

0

ಪಾರೆಂಕಿ : ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ಮಡಂತ್ಯಾರಿನ ಗಣೇಶ ಮಂಟಪದಿಂದ ಪ್ರಾರಂಭಗೊಂಡು ವಿಜೃಂಭಣೆಯ ಮೆರವಣಿಗೆ ಹಾಗೂ ವಾದ್ಯ ಘೋಷಗಳೊಂದಿಗೆ ಫೆ.3 ರಂದು ನೆರವೇರಿತು.

ಶ್ರೀ ಕ್ಷೇತ್ರದಲ್ಲಿ ಫೆ .3 ರಿಂದ ಫೆ. 5 ರ ವರ್ಷಾವಧಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಫೆ. 3 ರಂದು ಬೆಳಗ್ಗೆ ಹೊರಕಾಣಿಕೆ ಸಮರ್ಪಣೆ, . ಮಹಾಪೂಜೆ ನಡೆಯಿತು.

ದೇಗುಲದ ಪ್ರಧಾನ ಅರ್ಚಕರಾದ ಪೇಜಾವರ ಶ್ರೀಧರ ರಾವ್ ನೇತೃತ್ವದಲ್ಲಿ ಧಾರ್ಮಿಕ, ವೈದಿಕ, ಪೂಜಾ ವಿಧಿ- ವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವಿಠಲ ಶೆಟ್ಟಿ ಮೂಡಯೂರು ಮೆರವಣಿಗೆಯನ್ನು ಉದ್ಘಾಟಿಸಿದರು.

ಹೊರೆಕಾಣಿಕೆ ಸಂಚಾಲಕರದ ಕಿಶೋರ್ ಶೆಟ್ಟಿ ಮೂಡಯೂರು, ಅಶೋಕ್ ಗುಂಡಿಯಲ್ಕೆ, ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆಯು ನಡೆಯಿತು.

ಮೆರವಣಿಗೆಯಲ್ಲಿ ಸ್ವಾಮಿ ಕೊರಗಜ್ಜ ಮಹಿಳಾ ತಂಡ ಉಡುಪಿ ಇವರಿಂದ ಆಕರ್ಷಣಿಯ ಚೆಂಡೆ ವಾದನ ಹಾಗೂ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮೆರವಣಿಗೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರತ್ನಾಕರ ಶೆಟ್ಟಿ ಮೂಡಯೂರು, ಶ್ರೀಮತಿ ವೇದಾವತಿ ಆಚಾರ್ಯ, ಬೇಬಿ ಆನಂದ ಮೂಲ್ಯ, ಪುಷ್ಪರಾಜ ಗೌಡ, ಗುರುರಾಜ ಹಚ್ಚಬೆ, ಹಾಗೂ ಶ್ರೀ ಜಯಂತ ಶೆಟ್ಟಿ ಭಂಡಾರಿ ಗುಡ್ಡೆ, ಪ್ರಶಾಂತ್ ಪ್ರತಿಮಾ ನಿಲಯ ಪಾರೆಂಕಿ, ಸಾಂತಪ್ಪ ಗೌಡ, ಕಾಂತಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಹಿರಿಯರು, ವಿದ್ಯಾ ಸರಸ್ವತಿ ಭಜನಾ ಮಂಡಳಿಯ ಸದಸ್ಯರು, ಗ್ರಾಮಸ್ಥರು, ಊರ ಪರವೂರ ಕ್ಷೇತ್ರದ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

ನೂರಾರು ಜನ ಹೊರೆ ಕಾಣಿಕೆ ಸಮರ್ಪಿಸಿದರು. ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

p>

LEAVE A REPLY

Please enter your comment!
Please enter your name here