ಗುಂಡೂರಿ: ಜಾನುವಾರು ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವು

0

ವೇಣೂರು: ಜಾನುವಾರು ಹಾಯ್ದು ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಂಡೂರಿ ಗ್ರಾಮದ ದರಿಕಂಡ ನಿವಾಸಿ ಸದಾನಂದ ಪೂಜಾರಿ ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45ವ) ಮೃತಪಟ್ಟ ದುರ್ದೈವಿ.

ಹಟ್ಟಿಯಲ್ಲಿ ಮೇವು ಹಾಕುತ್ತಿದ್ದಾಗ ಅನಿರೀಕ್ಷಿತವಾಗಿ ಜಾನುವಾರು ಹಾಯ್ದು ಮೋಹಿನಿ ರವರ ಕುತ್ತಿಗೆಯ ಭಾಗಕ್ಕೆ ದನದ ಕೊಂಬು ತಾಗಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.27ರಂದು ಮೃತಪಟ್ಟಿದ್ದಾರೆ.

ಮೃತರು ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here