ಅಳದಂಗಡಿ: ಇತಿಹಾಸ ಪ್ರಸಿದ್ದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ಜಾತ್ರ ಮಹೋತ್ಸವವು ದೇವಸ್ಥಾನದ ಆಡಳಿತ ಮೋಕ್ತೇಸರ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.14 ರಿಂದ ಜ.20 ರವರೆಗೆ ನಡೆಯಲಿದೆ.
ಜ.14 ಶನಿವಾರ ಮಕರ ಸಂಕ್ರಮಣ, ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಕುಣಿತ ಭಜನೆ ಹಾಗೂ ಪ್ರತೀ ದಿನ ವಿವಿಧ ವೈದಿಕ ವಿಧಿವಿಧಾನಗಳು, ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಜ.18 ಬುಧವಾರ: ಬೆಳಿಗ್ಗೆ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 6-30ರಿಂದ ಭಜನೆ, ಶ್ರೀ ದೇವರ ದರ್ಶನ ಬಲಿ, ಚಂದ್ರಮಂಡಲ ಉತ್ಸವ ನಡೆಯಲಿದೆ. ರಾತ್ರಿ ಗಂಟೆ 8-00ರಿಂದ ಸ.ಪ.ಪೂ. ಕಾಲೇಜು ಅಳದಂಗಡಿ ಹಾಗೂ ಸೈಂಟ್ ಪೀಟರ್ ಕ್ಲೇವರ್ ಆಂಗ್ಲಮಾದ್ಯಮ ಶಾಲೆ ಅಳದಂಗಡಿ ಮತ್ತು ಗುಡ್‌ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಹಾಗೂ ರಾತ್ರಿ ಗಂಟೆ 8-00ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಜ.19 ಗುರುವಾರ: ಬೆಳಿಗ್ಗೆ ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಸಂಜೆ ಗಂಟೆ 6-30ರಿಂದ ಭಜನೆ, ಶ್ರೀ ಮೂಜಿಲ್ನಾಯ ದೈವ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ.
ಜ.20 ಶುಕ್ರವಾರ: ಬೆಳಿಗ್ಗೆ ಪ್ರಾರ್ಥನೆ, ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ರಿಂದ ಚಂದ್ರಮಂಡಲ ಉತ್ಸವ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6-00ರಿಂದ ಭಜನೆ
ರಾತ್ರಿ ಗಂಟೆ 7-30ರಿಂದ ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೊಫೋನ್ ವಾದನ ಗಂಟೆ 8-00ರಿಂದ ಸ.ಹಿ.ಪ್ರಾ.ಶಾಲೆ, ಅಳದಂಗಡಿ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಂಟೆ 9-00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 10-00ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ದೇವರ ಮಹೋತ್ಸವ, ವಸಂತಕಟ್ಟೆ ಪೂಜೆ, ಮಹಾ ರಥೋತ್ಸವ, ಸುಡುಮದ್ದು ಪ್ರದರ್ಶನ,
ಶ್ರೀ ಕೊಡಮಣಿತ್ತಾಯ ದೈವದ ನೇಮ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜ ಅವರೋಹಣ.
ಜ.21ಶನಿವಾರ: ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಶುದ್ಧ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ.
ಜ.22 ಆದಿತ್ಯವಾರ: ರಂಗಪೂಜೆ ಹಾಗೂ ಮಡಂತಿಮಾರು ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ.ಭಕ್ತಾದಿಗಳು ನೀಡುವ ಹಸಿರುವಾಣಿಯನ್ನು ಜ.18ರಂದು ದೇವಸ್ಥಾನಕ್ಕೆ ಸಮರ್ಪಿಸಬಹುದು ಎಂದು ಸಮಿತಿಯವರು ತಿಳಿಸಿದ್ದಾರೆ.