ಬೆಳ್ತಂಗಡಿ :ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ 5 ಕಡೆಗಳಲ್ಲಿ ಮಾತ್ರ ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡಿದ್ದು, ಇದೀಗ ತಾಲೂಕಿನಾದ್ಯಂತ ನೇತ್ರಾವತಿ ಸೇರಿದಂತೆ ಉಪನದಿಗಳಲ್ಲಿ ಎಗ್ಗಿಲ್ಲದೆ ನಡೆಯುವ ಮರಳು ದಂಧೆ ಬಳ್ಳಾರಿ ಗಣಿಗಾರಿಕೆಯಂತೆ ನಡೆಯುತ್ತಿದೆ.
‘ಮರಳು ದಂಧೆಗಳ ಮೇಲೆ ಲೋಕಾಯುಕ್ತ ಧಾಳಿ ನಡೆಸಿದ ಮರುದಿನ ಅದೇ ಸ್ಥಳದಲ್ಲೇ ಮರಳುಗಾರಿಕೆ ನಡೆಸುತ್ತಾರೆ ಎಂದರೆ ಇದರ ಹಿಂದೆ ನೇರವಾಗಿ ಶಾಸಕ ಹರೀಶ್ ಪೂಂಜಾ ಅವರ ಕೈವಾಡವಿದೆ ಎಂದು ಸಿ ಪಿ ಎಂ ತಾಲೂಕು ಸದಸ್ಯ ಶೇಖರ ಲಾಯಿಲ ಹೇಳಿದರು. ಅವರು ಜ.5 ರಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರೂ ಜೆಸಿಬಿ, ದೋಣಿ, ಡ್ರೆಜ್ಜಿಂಗ್ ಯಂತ್ರಗಳನ್ನು ಬಳಸಿ ಮರಳು ದಂಧೆ ನಡೆಸುತ್ತಾರೆ . ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲೂಕು ಆಡಳಿತ, ಪೋಲಿಸ್ ಇಲಾಖೆ, ಅಧಿಕಾರಿಗಳು ಮಾಮೂಲಿಗಾಗಿ ಕೈಯೊಡ್ಡಿ ಮೌನವಾಗಿದ್ದಾರೆ ಎಂದು ಆರೋಪಿಸಿದರು. ಬೆಳ್ತಂಗಡಿ ನಗರ ಪಂಚಾಯತ್ ನ ನಿಷೇಧಿತ ಪ್ರದೇಶದಲ್ಲಿಯೇ ಮರಳು ದಂಧೆ ನಡೆಯುತ್ತದೆ.
ತಾಲೂಕಿನಲ್ಲಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. 40% ಕಮಿಷನ್ ದಂಧೆ ಗುತ್ತಿಗೆದಾರರಿಂದ ಕಳಪೆ ಮಟ್ಟದ ಕಾಮಗಾರಿ ನಡೆಸುತ್ತಿದೆ. 40% ಕಮಿಷನ್ ಬಗ್ಗೆ ಮಾತನಾಡಿದರೆ ಸಾಕ್ಷಿ ಹೇಳುವ ಬಿಜೆಪಿಗರ ಮಿದುಳು ನಿಷ್ಕ್ರಿಯಗೊಂಡಂತೆ ಭಾಸವಾಗುತ್ತಿದೆ. ಲಂಚಕ್ಕೆ ಯಾರಾದರೂ ರಶೀಧಿ ಕೊಡ್ತಾರಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಕಮಿಷನ್ ದಂಧೆ ಬಿಡುಗಡೆಯಾಗದ ಅನುದಾನದಿಂದ ಹತ್ತಾರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೋಟತ್ತಾಡಿ ಚಂದ್ರಶೇಖರ ಪೂಜಾರಿ ಆತ್ಮಹತ್ಯೆ ಪ್ರಕರಣ, ಶಿಬಾಜೆಯಲ್ಲಿ ನಡೆದ ಕೊಲೆ, ದರೋಡೆ ದಲಿತ ದೌರ್ಜನ್ಯ ತಡೆ ಕಾಯ್ದೆ ಪ್ರಕರಣದಲ್ಲಿ ಆರೋಪಿಗಳ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ಕ್ರಿಮಿನಲ್ ಆರೋಪಿಗಳ ಜೊತೆಗೆ ಬಂಟ್ವಾಳ ಡಿವೈಎಸ್ಪಿ ಕಾಮೀಲಾಗಿದ್ದಾರೆ ಎಂದು ಆರೋಪಿಸಿದರು , ಆರಂಬೋಡಿಯಲ್ಲಿ ನಡೆದ ಸುರತ್ಕಲ್ ನ ನಾಟಕ ತಂಡದ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ, ಕಲಾವಿದರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಇಡೀ ದೌರ್ಜನ್ಯವಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಯಾನಂದ ಪಿಲಿಕ್ಕಲ ಉಪಸ್ಥಿತರಿದ್ದರು.