ಬೆಳ್ತಂಗಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಮುಂಡಾಜೆ ಇದರ 2021- 2022 ನೇ ಸಾಲಿನ ವಾರ್ಷಿಕ ಮಹಾಸಭೆಯು ಜಮಾಅತ್ ಗೌರವಾಧ್ಯಕ್ಷ ಸಯ್ಯಿದ್ ಅಹಮ್ಮದ್ ಪೂಕೋಯ ತಂಙಳ್ ಮಾಡನ್ನೂರು ಪುತ್ತೂರು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮುಂದಿನ ಸಾಲಿಗೆ ನೂತನ ಆಡಳಿತ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಜಿ. ಮುಹಮ್ಮದ್ (ಜಿ.ಕೆ ಪುತ್ತು), ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಾಜಿ ಕಲ್ಲಾಜೆ,ಕಾರ್ಯದರ್ಶಿಯಾಗಿ ಅಬ್ಬಾಸ್ ಕೆ.ಎಮ್ (ಕಸಿಮಾವು), ಜೊತೆ ಕಾರ್ಯದರ್ಶಿಯಾಗಿ ಇಸ್ಹಾಕ್ ಯು.ಎ, ಕೋಶಾಧಿಕಾರಿಯಾಗಿ ಅಬ್ಬಾಸ್ (ಹಂಝ BMA) ಇವರು ಅವಿರೋಧವಾಗಿ ಆಯ್ಕೆಯಾದರು.ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಕರೀಂ ಕಲ್ಲಾಜೆ, ಜಿ.ಕೆ ಮೊಯಿದಿನ್ (ಜಿ.ಕೆ ಬಾವು), ಸಿದ್ದೀಕ್ ಸಾಗರ್, ಇಬ್ರಾಹಿಂ ಕೆ. ಕೂಳೂರು, ಅಬ್ದುಲ್ ಅಝೀಝ್ ಮತ್ತು ಜಾಕಿರ್ ಶರೀಫ್ ಇವರನ್ನು ಆರಿಸಲಾಯಿತು.
ಖತೀಬ್ ಹಮೀದ್ ದಾರಿಮಿ, ಮುಅದ್ದಿನ್ ಶರೀಫ್ ಮುಸ್ಲಿಯಾರ್, ಸಹಕರಿಸಿದರು.ಮಸ್ಜಿದ್ನ ಅಭಿವೃದ್ಧಿ ಯೋಜನೆಗಳು, ಮುಂದೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳು ಹಾಗೂ ಜಮಾಅತ್ ಸಮಿತಿಯ ಜವಾಬ್ದಾರಿಗಳ ಬಗ್ಗೆ ಗೌರವಾಧ್ಯಕ್ಷ ಮಾಡನ್ನೂರು ತಂಙಳ್ ಸೂಕ್ತ ನಿರ್ದೇಶನ ನೀಡಿದರು.
ಬದ್ರಿಯಾ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ ನೂತನ ಆಡಳಿತ ಸಮಿತಿ ರಚನೆ
p>