ಕಾವೇರಿ ನೀರಾವರಿ ನಿಗಮದಿಂದ ತಾಲೂಕಿಗೆ ವಿಶೇಷ ಯೋಜನೆ: ಪ.ಜಾತಿ, ಪಂಗಡದ 50 ಮಂದಿಗೆ ತಲಾ ರೂ. 5 ಲಕ್ಷದ ವೆಚ್ಚದಲ್ಲಿ ಕೊಳವೆ ಬಾವಿ: ಪಿಲಿಗೂಡಿನಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ

0


ಬೆಳ್ತಂಗಡಿ: ಕಾವೇರಿ ನೀರಾವರಿ ನಿಗಮ ಇದರ ವತಿಯಿಂದ ಶಾಸಕರ ಸತತ ಪ್ರಯತ್ನದಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಸರಕಾರದ ವಿಶೇಷ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 50 ಮಂದಿಗೆ ಮಂಜುರಾದ 50 ಕೊಳವೆ ಬಾವಿಗಳಿಗೆ ಶಾಸಕ ಹರೀಶ್ ಪೂಂಜ ಡಿ.20ರಂದು ಕಣಿಯೂರು ಗ್ರಾಮದ ಬರಂಬು ನಿವಾಸಿ ಶ್ರೀಮತಿ ದೇವಕಿ ಗುರುವಪ್ಪ ನಾಯ್ಕ ಅವರ ಜಾಗದಲ್ಲಿ ಚಾಲನೆ ನೀಡಿದರು.

ಈ ಯೋಜನೆಯಲ್ಲಿ ತಾಲೂಕಿನ 25 ಮಂದಿ ಪ.ಜಾತಿಯವರಿಗೆ ಹಾಗೂ 25 ಮಂದಿ ಪ. ಪಂಗಡದವರಿಗ ತಲಾ ರೂ. 5 ಲಕ್ಷ ವೆಚ್ಚದಲ್ಲಿ ಕುಡಿಯಲು ನೀರು ಮತ್ತು ಕೃಷಿ ನೀರಾವರಿಗಾಗಿ ಕೊಳವೆ ಬಾವಿ ಹಾಗೂ ಪಂಪು ಸೆಟ್, 10 ಸ್ಪ್ರಿಂಕ್ಲೇರ್, ವಿದ್ಯುತ್ ಸಂಪರ್ಕ, ಕಲ್ಪಿಸಲಾಗುತ್ತದೆ. ತಾಲೂಕಿನ ಇನ್ನು ಹೆಚ್ಚುವರಿಯಾಗಿ 80 ಕೊಳವೆ ಬಾವಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದೆ. ಒಟ್ಟು ತಾಲೂಕಿನಲ್ಲಿ 130 ಮಂದಿ ಎಸ್.ಟಿ, ಎಸ್.ಸಿ ಕುಟುಂಬಗಳಿಗೆ ಈ ಸೌಲಭ್ಯ ದೊರೆಯಲಿದೆ. ಇದು ರಾಜ್ಯದಲ್ಲೇ ಮೊದಲ ಹೋಜನೆ ಎಂದು ಶಾಸಕ ಹರೀಶ್ ಪೂಂಜ ಈ ಸಂದರ್ಭ ನುಡಿದರು.

ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಜಯಂತ ಕೋಟ್ಯಾನ್, ಕಣಿಯೂರು ಪದ್ಮುಂಜ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕರ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ್ ಉರುವಾಲು, ಕೊರಿಂಜ ಪಂಚಲಿಂಗೇಶ್ವರ ದೇವದ್ಥಾನ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಚೆನ್ನಕೇಶವ ಮುಂಡಾಜೆ, ರಾಘವ ಕಲ್ಮಂಜ, ತಾ.ಪಂ. ಮಾಜಿ ಸದಸ್ಯೆ ಅಮಿತಾ ಕುಶಾಲಪ್ಪ ಗೌಡ, ಕಣಿಯೂರು ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಜಲಜಾಕ್ಷಿ, ಸದಸ್ಯರಾದ ಯಶೋಧರ ಶೆಟ್ಟಿ, ಸೇಸಪ್ಪ ಮೂಲ್ಯ, ಮೋಹಿನಿ, ಪ್ರವೀಣ, ಪ್ರಿಯಾಂಕಾ, ಗುತ್ತಿಗೆದಾರ ಕೃಷ್ಣರಾಜ್ ಭಟ್, ಸುನೀಲ್, ರಾಮಣ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here