ಮೂಡಬಿದಿರೆಯ ಜಾಂಬೂರಿ ಉತ್ಸವಕ್ಕೆ ವಿಜಯ ಕ್ರೆಡಿಟ್ ಕೋ.ಆ.ಸೊಸೈಟಿಯಿಂದ 50 ಸಾವಿರ ದೇಣಿಗೆ

0

ಬೆಳ್ತಂಗಡಿ: ಡಿ.21 ರಿಂದ 27ರ ವರೆಗೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುವ ವಿಶ್ವದ 25ನೇ ಅಂತರಾಷ್ಟ್ರೀಯ ಸ್ಕೌಟ್ ಗೈಡ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮಕ್ಕೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆಯಿಂದ ರೂ 50 ಸಾವಿರ ದೇಣಿಗೆಯನ್ನು ಜಾಂಬೂರಿ ಉತ್ಸವದ ಪ್ರಧಾನ ಕಾರ್ಯದರ್ಶಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷರು ಮೋಹನ ಆಳ್ವರವರಿಗೆ ಸೊಸೈಟಿ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ಡಿ.16 ರಂದು ಮೂಡಬಿದ್ರೆಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ನಿರ್ದೇಶಕರಾದ ಜಯಂತ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ ಸಾಧನಾ, ಎಂ ಜಯರಾಮ ಭಂಡಾರಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಸುಜಯ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here