






ಪಡಂಗಡಿ: ಪರಮ ಪಾವನ ಕ್ಷೇತ್ರವಾದ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಉತ್ಸವದ ಸಲುವಾಗಿ ಭವ್ಯವಾದ ಚಂದ್ರಮಂಡಲ ರಥ, ಪಲ್ಲಕ್ಕಿ ಹಾಗೂ ಬ್ರಹ್ಮರಥವನ್ನು ಸಮರ್ಪಿಸಲು ಭಕ್ತಾದಿಗಳ ಸಹಕಾರದೊಂದಿಗೆ ಹಿರಿಯರು ಬೃಹತ್ ಯೋಜನೆಯನ್ನು ರೂಪಿಸಿದ್ದಾರೆ.


ಸುಮಾರು 1 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಐತಿಹಾಸಿಕ ರಥಗಳ ನಿರ್ಮಾಣ ಯೋಜನೆಗೆ ಪುಷ್ಪಾವತಿ ಕೇದೆ ಮತ್ತು ಮಕ್ಕಳು 1 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಈ ದೇಣಿಗೆಯ ಮೊತ್ತವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೂಲ್ಯ ಕೊಂಡೆಮಾರು ಅವರಿಗೆ ಹಸ್ತಾಂತರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಅನಂತ ಎಸ್. ಇರ್ವತ್ರಾಯ ತಂಗೋಯಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.









