






ಕಲ್ಮಂಜ,ಸಿದ್ದಬೈಲು ಪರಾರಿ ಸ.ಹಿ ಪ್ರಾಥಮಿಕ ಶಾಲೆಯಲ್ಲಿ”ಉಚಿತ ಆರೋಗ್ಯ ತಪಾಸಣಾ ಶಿಬಿರ”.ರೋಟರಿ ಸಮುದಾಯ ದಳ,ಕಲ್ಮಂಜ. ಹಾಗೂ “ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ – ಬೆಳ್ತಂಗಡಿ ತಾಲೂಕು,ದ ಕ.”ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ),ಕಕ್ಕಿಂಜೆ.ಇವರ ಸಹಯೋಗದಲ್ಲಿ,ಸತ್ಯನಪಲ್ಕೆ,ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಸಂಗಮಶ್ರೀ ಯುವಕ ಮಂಡಲ (ರಿ) ಕಲ್ಮಂಜ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಲ್ಮಂಜ.ಇವರ ಸಂಪೂರ್ಣ ಸಹಕಾರದೊಂದಿಗೆ.,ಸಂಘ ಸಂಸ್ಥೆಗಳ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ,ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್ ಮಾತನಾಡಿ ರೋಟರಿ ಸಮುದಾಯದಳ ಕಲ್ಮಂಜ ಹಾಗೂ ಶ್ರೀ ಕೃಷ್ಣ ಆಸ್ಪತ್ರೆ, ಆಸ್ಪತ್ರೆ,ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ),ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರವು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಹಾಗೂ ಜಾಗೃತಿಯನ್ನು ಮೂಡಿಸಲು ಸಹಕಾರಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿರುವುದರಿಂದ ಜನರಿಗೆ ರೋಗಲಕ್ಷಣಗಳು ಮೂಲದಲ್ಲೇ ಪತ್ತೆಹಚ್ಚಲು ಸಹಕಾರಿ ಎಂದರು, ಡಾ.ಮುರಳಿಕೃಷ್ಣ ಇರ್ವತ್ರಾಯ ಇವರ ಗ್ರಾಮೀಣ ಆರೋಗ್ಯ ಸೇವೆಯನ್ನು ಶ್ಲಾಘಿಸಿದರು.
ಅತಿಥಿಗಳನ್ನು ಸ್ವಾಗತಿಸಿ, ರೋಟರಿ ಸಮುದಾಯ ದಳ, ಕಲ್ಮಂಜದ ಅಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿದರು.ಮುಖ್ಯ ಅತಿಥಿಗಳಾದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋಟರಿಯನ್ ಶ್ರೀಧರ ಕೆವಿ ಮಾತನಾಡಿ ರೋಟರಿ ಕ್ಲಬ್ ಸಾಮಾಜಿಕ ಸೇವಾ ಕಾರ್ಯಗಳನ್ನು ವಿವರಿಸಿದರು.,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವ ಸನ್ಮಾನ ಸ್ವೀಕರಿಸಿ,ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ಜನರು ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದೂ ಅಷ್ಟೇ ಮುಖ್ಯವಾಗಿದೆ.
ಆರೋಗ್ಯ ಮಹಾಭಾಗ್ಯ ಎಂಬುದು ನಮ್ಮ ಹಿರಿಯರು ನೀಡಿದ ಅಮೂಲ್ಯವಾದ ಗಾದೆ ಮಾತು. ಜೀವನದಲ್ಲಿ ನಾವು ಎಷ್ಟೇ ಸಂಪತ್ತು ಗಳಿಸಿದರೂ, ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವುದನ್ನೂ ಅನುಭವಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ರೋಗಗಳು ಹೆಚ್ಚಾಗುತ್ತಿವೆ. ಆದರೆ, ಅನೇಕರು ಸಮಯದ ಅಭಾವ ಅಥವಾ ಆರ್ಥಿಕ ಸಂಕಷ್ಟದಿಂದಾಗಿ ಆರಂಭದಲ್ಲಿ ಆರೋಗ್ಯದ ಕಡೆಗೆ ಗಮನ ಕೊಡುವುದಿಲ್ಲ, ಇಂತಹ ಆರೋಗ್ಯ ತಪಾಸಣಾ ಶಿಬಿರವು ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು,


ಕಾರ್ಯಕ್ರಮದಲ್ಲಿ ರೋಟರಿ ಸಮುದಾಯದಳ ಬೆಳ್ತಂಗಡಿ ಅಧ್ಯಕ್ಷರಾದ ರೋಟರಿಯನ್ ಶ್ರೀ ವೆಂಕಟೇಶ್ ಭಟ್,ಕಜೆ, ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಗಿರೀಶ್,ಡಾ.ಪುಲತ್ಸ್ಯ ಗಂಗೋಪಧ್ಯಾಯ,ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಯೊಗೇಶ್,ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಸಮುದಾಯದಳ ಕಾರ್ಯದರ್ಶಿ ವಸಂತಿ,ಕಾರ್ಯಕ್ರಮದಲ್ಲಿ , ಕಲ್ಮಂಜ,ಪರಾರಿ ವೆಂಕಟರಮಣ ಹೆಬ್ಬಾರ್,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮೋಹನ್ ಗೌಡ,ಸಂಗಮಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರಾದ ಜಯಂತ ರಾವ್,ಸತ್ಯನಪಲ್ಕೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ,ಶ್ರೀ ಕೃಷ್ಣ ಆಸ್ಪತ್ರೆ, ಸಿಬ್ಬಂದಿಗಳಾದ ಗಣೇಶ್.ಬಿ,ಮ್ಯಾಥ್ಯೂ,ಕೆಎಂಸಿ ಆಸ್ಪತ್ರೆಯ ಪಿ ಆರ್ ಓ ಸುಪ್ರೀತಾ,ಕಾರ್ಯಕ್ರಮದಲ್ಲಿ ,ಸಂಘ ಸಂಸ್ಥೆಗಳ ಸದಸ್ಯರು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ರೋಟರಿ ಸಮುದಾಯ ದಳ ಕಲ್ಮಂಜದ ಕಾರ್ಯದರ್ಶಿ ವಸಂತಿ ಕಾರ್ಯಕ್ರಮ ನಿರೂಪಿಸಿ, ಶಾಂತಪ್ಪ ಧನ್ಯವಾದವಿತ್ತರು.
ಶಿಬಿರದಲ್ಲಿ ತಜ್ಞವೈದ್ಯರ (ಫಿಸಿಶಿಯನ್) ತಪಾಸಣೆ,ರಕ್ತದೊತ್ತಡ (BP) ತಪಾಸಣೆ,ಹಿಮೋಗ್ಲೋಬಿನ್ (HB) ತಪಾಸಣೆ, ಮಧುಮೇಹ (GRBS)ತಪಾಸಣೆ,ರಕ್ತದಲ್ಲಿ, ಮೂರು ತಿಂಗಳ ಸರಾಸರಿ ಸಕ್ಕರೆ ಪ್ರಮಾಣ (HbA1C) ತಪಾಸಣೆ,ಇಸಿಜಿ (ECG), ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ ಮೊದಲಾದ ಆರೋಗ್ಯ ತಪಾಸಣೆ ಮಾಡಲಾಯಿತು.









