ದೋಂಡೋಲೆಯಲ್ಲಿ ‘ಶ್ರೀ ರಾಮ ಮಕ್ಕಳ ಭಜನಾ ತಂಡ’ ಉದ್ಘಾಟನೆ

0

​ದೋಂಡೋಲೆ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ವತಿಯಿಂದ ದೋಂಡೋಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಶ್ರೀ ರಾಮ ಮಕ್ಕಳ ಭಜನಾ ತಂಡ’ (ಕುಣಿತ ಭಜನೆ) ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಶ್ರದ್ಧಾ-ಭಕ್ತಿಗಳೊಂದಿಗೆ ನೆರವೇರಿತು.​

ಈ ಕಾರ್ಯಕ್ರಮದಲ್ಲಿ ಭಜನಾ ಗುರುಗಳಾದ ನಾಗೇಶ್ ಬಿ. ನೆರಿಯ ಹಾಗೂ ಮಾಲಿನಿ ಹೆಗ್ಡೆ ಮುಖ್ಯ ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.​

ಅಂತೆಯೇ, ಧರ್ಮಸ್ಥಳ ಮಹಿಳಾ ಭಜನಾ ಮಂಡಳಿಯ ಸಂಚಾಲಕರಾದ ಮಮತಾ ಪ್ರಮಿಳ ಮತ್ತು ಊರಿನ ಹಿರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಮಕ್ಕಳ ನೂತನ ಭಜನಾ ತಂಡಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here