






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಶುಭ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಪೂಜ್ಯ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಿ, ಶುಭಾಶಯ ಕೋರಲಾಯಿತು.


ಈ ಶುಭ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ನ ಪ್ರಮುಖ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಹೆಗ್ಗಡೆಯವರ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ್, ಮಾಜಿ ಪ್ರಾಂತೀಯ ಅಧ್ಯಕ್ಷರುಗಳಾದ ಧರನೇಂದ್ರ ಕೆ. ಜೈನ್, ವಸಂತ ಶೆಟ್ಟಿ ಶ್ರದ್ಧಾ ಹಾಗೂ ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ಗೌಡ, ಜಯರಾಮ್ ಭಂಡಾರಿ ಎಂ., ಹೇಮಂತ ರಾವ್ ಎರ್ಡೂರ್, ರವೀಂದ್ರ ಶೆಟ್ಟಿ ಬಳಂಜ ಲಯನ್ಸ್ ಸಂಸ್ಥೆಯ ಸದಸ್ಯರುಗಳಾದ ಭುಜಬಲಿ ಧರ್ಮಸ್ಥಳ, ಗೋಪಾಲಕೃಷ್ಣ ಕಾಂಚೋಡು ಮತ್ತು ಎನ್. ಪಿ. ತಂಗಚ್ಚನ್ ಸೇರಿದಂತೆ ಹಲವರು ಭಾಗವಹಿಸಿದ್ದರು.









