ಶ್ರೀ ರಾಮ ಕ್ಷೇತ್ರ ಅಯೋಧ್ಯೆಯ ಶ್ರೀರಾಮ ಶಾಖಾ ಮಠದ ಯೋಜನೆಗೆ ಮಸ್ಕತ್‌ನ ಶ್ರೀರಾಮ ಭಕ್ತರಿಂದ ರೂ.10 ಲಕ್ಷಕ್ಕೂ ಅಧಿಕ ದೇಣಿಗೆ

0

ಧರ್ಮಸ್ಥಳ : ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಉತ್ತರ ಪ್ರದೇಶದ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀರಾಮ ಶಾಖಾ ಮಠದ ನಿರ್ಮಾಣ ಯೋಜನೆಗೆ ಮಸ್ಕತ್‌ನಲ್ಲಿರುವ ಶ್ರೀರಾಮ ಭಕ್ತರು ಒಗ್ಗೂಡಿ ಸಂಗ್ರಹಿಸಿದ ₹10 ಲಕ್ಷಕ್ಕೂ ಅಧಿಕ ಮೊತ್ತವನ್ನು ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಮಂಡಲೇಶ್ವರ 1008 ಸದ್ಗುರುಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜ್ ಇವರಿಗೆ ಅ. 24ರಂದು ಹಸ್ತಾಂತರಿಸಿದರು.

ಒಮಾನ್ ಬಿಲ್ಲವಾಸ್‌ ಮಸ್ಕತ್‌ನ ಮಾಜಿ ಅಧ್ಯಕ್ಷರು ಹಾಗೂ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗಲ್ಫ್ ರಾಷ್ಟ್ದಗಳ ಉಪಾಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ ಅವರ ನೇತೃತ್ವದಲ್ಲಿ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ರಾಮ ಪೂಜಾರಿ ಕಲ್ಯಾಣಪುರ , ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಉಡುಪಿ ಜಿಲ್ಲಾ ಬಿಲ್ಲವ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬಿಜೆಪಿ ಪ್ರಭಾರಿ ಜಯಂತ್ ಕೋಟ್ಯಾನ್, ಮೂಡುಬಿದಿರೆ ಮಂಡಲ ಬಿಜೆಪಿ ಕಾರ್ಯದರ್ಶಿ ರಂಜೀತ್ ಪೂಜಾರಿ ತೋಡಾರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್, ಯುವ ಉದ್ಯಮಿ ಕೆ. ಕಾಮರಾಜ್ ಸುವರ್ಣ, ಬಿರುವೆರ್ ಕಾಪು ಸಮಿತಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೋಟಿಯನ್, ಮಜೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಪೂಜಾರಿ, ರಾಮ ಪೂಜಾರಿ, ರಿತೇಶ್ ಕೋಟ್ಯಾನ್, ಶುಭ ರಾಜೇಂದ್ರ ಚಿಲಿಂಬಿ, ಸುರೇಂದ್ರ ಅಂಚನ್, ಉಮೇಶ್ ಬಂಗೇರ ಹಾಗೂ ದೀಪಕ್‌ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಭಕ್ತರನ್ನು ಸ್ವಾಗತಿಸಿ ಸ್ವಾಮೀಜಿಯವರು ಉಪಸ್ಥಿತರಿದ್ದ ಎಲ್ಲರಿಗೂ ಆಶೀರ್ವಚನ ನೀಡಿದರು.ಮಸ್ಕತ್‌ನ ಶ್ರೀರಾಮ ಭಕ್ತರು ಉದಾರ ಮನಸ್ಸಿನಿಂದ ನೀಡಿರುವ ಈ ದೇಣಿಗೆಯು ಅವರ ಭಕ್ತಿ, ಒಗ್ಗಟ್ಟು ಹಾಗೂ ಅಯೋಧ್ಯೆಯಲ್ಲಿ ಉದ್ದೇಶಿತ ಶ್ರೀರಾಮ ಮಠದ ಅಭಿವೃದ್ಧಿಗೆ ಸಹಕರಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿದೇಶದಲ್ಲಿ ನೆಲೆಸಿದ್ದರೂ ಧಾರ್ಮಿಕ ಕಾರ್ಯಗಳ ಬಗ್ಗೆ ತೋರುವ ಭಕ್ತರ ಕಾಳಜಿ, ಸಾಮೂಹಿಕ ಸೇವಾ ಮನೋಭಾವ ಮತ್ತು ಧಾರ್ಮಿಕ ಯೋಜನೆಗಳಿಗೆ ಬೆಂಬಲ ನೀಡುವ ಅವರ ಸಮರ್ಪಣಾ ಭಾವಕ್ಕೆ ಈ ಕಾರ್ಯವು ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here