ಉಜಿರೆ ಎಸ್‌ಡಿಎಂಐಟಿಯಲ್ಲಿ ಅ. 29ರಿಂದ ‘ಸ್ಪರ್ಧಂ-2026’ ಅಂತರಕಾಲೇಜು ಸ್ಪರ್ಧೋತ್ಸವವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ – ಅ. 30ರಂದು ಸ್ಟಾರ್ ನೈಟ್

0

ಉಜಿರೆ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಹಾಗೂ ಕ್ರೀಡಾಸ್ಫೂರ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಉಜಿರೆಯ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಡಿಎಂಐಟಿ) ವತಿಯಿಂದ ಅಕ್ಟೋಬರ್ 29 ಮತ್ತು 30ರಂದು ಎರಡು ದಿನಗಳ ‘ಸ್ಪರ್ಧಂ-2026’ ಅಂತರಕಾಲೇಜು ಸ್ಪರ್ಧೋತ್ಸವ ಆಯೋಜಿಸಲಾಗಿದೆ ಎಂದು ಎಸ್ ಡಿ ಎಂ ಐಟಿಯ ಪ್ರಾಂಶುಪಾಲರಾದ ಸಂದೀಪ್ ಹೇಳಿದರು.

ಅ. 24 ರಂದು ಎಸ್ ಡಿ ಎಂ ಐಟಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ವಿದ್ಯಾರ್ಥಿಗಳು, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಈ ಸ್ಪರ್ಧೋತ್ಸವವು ಯುವಜನರಲ್ಲಿ ವೈಜ್ಞಾನಿಕ ಮನೋಭಾವ, ನವೀನ ಆಲೋಚನೆ, ಉದ್ಯಮಶೀಲತೆ, ನಾಯಕತ್ವ ಗುಣ, ಸಂವಹನ ಕೌಶಲ್ಯ ಹಾಗೂ ತಂಡಬದ್ಧವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುವ ಗುರಿ ಹೊಂದಿದೆ.

ಪ್ರಾಯೋಗಿಕ ಅನುಭವದ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಸ್ಪರ್ಧೋತ್ಸವದಲ್ಲಿ ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳೊಂದಿಗೆ ಕ್ವಿಜ್, ಪೇಪರ್ ಪ್ರೆಸೆಂಟೇಶನ್, ಟೆಕ್ನಿಕಲ್ ಪೋಸ್ಟರ್, ಐಡಿಯಾಥಾನ್, ಇನ್ನೋವೇಶನ್, ಸ್ಟಾರ್ಟ್‌ಅಪ್ ಪಿಚ್, ಕೋಡಿಂಗ್ ಚಾಲೆಂಜ್, ಹ್ಯಾಕಥಾನ್, ಟೆಕ್ನಿಕಲ್ ಟ್ರೆಷರ್ ಹಂಟ್, ಪ್ರಾಜೆಕ್ಟ್ ಮತ್ತು ನಾವೀನ್ಯತೆಯ ಪ್ರಸ್ತುತಿಗಳು, ವ್ಯವಹಾರ ಯೋಜನೆ ಪ್ರಸ್ತುತಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಹೊಸ ವಿಚಾರಗಳನ್ನು ಕಲಿಯಲು ಹಾಗೂ ಇತರ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಲಿದೆ ಎಂದು ವಿವರಿಸಿದರು.

ಸ್ಪರ್ಧೋತ್ಸವದ ಆಕರ್ಷಣೆಯಾಗಿ ಅಕ್ಟೋಬರ್ 30ರಂದು ಸಂಜೆ 7 ಗಂಟೆಗೆ ‘ಸ್ಟಾರ್ ನೈಟ್’ ಸೆಲೆಬ್ರಿಟಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಕಾಲೇಜು ಸಮುದಾಯಕ್ಕೆ ಮನರಂಜನೆ ಮತ್ತು ಸಾಂಸ್ಕೃತಿಕ ಸಂಭ್ರಮದ ಅನುಭವ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಸ್ಪರ್ಧೋತ್ಸವದಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು 9008359769, 9008490579, 8277401853 ಹಾಗೂ 08256-236961 ಸಂಖ್ಯೆಗಳ ಮೂಲಕ ಸಂಪರ್ಕಿಸಿ ನೋಂದಣಿ ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿ ಯಲ್ಲಿ ಉಪಪ್ರಾಂಶುಪಾಲರಾದ ಡಾ ಗಿರೀಶ್, ಸ್ಪರ್ಧಂ-2026 ಕಾರ್ಯಕ್ರಮದ ಸಂಯೋಜಕರಾದ ಡಾ ವಿದ್ಯಾಡಾ. ಶೋಭಾ ಉಪಸ್ಥಿತರಿದ್ದರು. ಸ್ಟಾರ್ಡಂ ಸಂಯೋಜಕರಾದ ಸಿವಿಲ್ ಇಂಜಿನಿಯರ್ ವಿಭಾಗ ಮುಖ್ಯಸ್ಥರಾದ ಡಾ. ರವೀಶ್ ಪಡುಮಲೆ ಸ್ವಾಗತಿಸಿ, ಧನ್ಯವಾದಗೈದರು.

LEAVE A REPLY

Please enter your comment!
Please enter your name here