






ಬೆಳ್ತಂಗಡಿ: ರಾಜ್ಯದಲ್ಲಿ ಮತದಾರರ ಪಟ್ಟಿಯಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ರಾಜ್ಯದ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದೆ.
ಭಾರತೀಯ ಚುನಾವಣಾ ಆಯೋಗ ಜೂನ್ 20ರಂದು ಆರಂಭಿಸಿದ್ದ ಮತದಾರರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಅ.24ರಂದು ಮುಕ್ತಾಯಗೊಂಡಿದೆ.
ಆಕ್ಷೇಪಣೆಗಳ ಪರಿಶೀಲನೆ, ನೋಟಿಸ್ ಗಳ ವಿಲೇವಾರಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇದೀಗ ಅಂತಿಮ ಪಟ್ಟಿಯ ಪ್ರಕಟಣೆಯತ್ತ ಎಲ್ಲರ ಗಮನ ನೆಟ್ಟಿದೆ.
ಕರಡು ಪಟ್ಟಿಯಲ್ಲಿ ಕೋಟ್ಯಂತರಮತದಾರರು:ಆಗಸ್ಟ್ 24ರಂದು ಪ್ರಕಟಗೊಂಡಿದ್ದಕರಡು ಮತದಾರರ ಪಟ್ಟಿಯ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 4.46 ಕೋಟಿ ಜನರ ಹೆಸರುಗಳು ಪಟ್ಟಿಯಲ್ಲಿ ಸೇರಿದ್ದವು. ಉಳಿದ ಹೆಸರುಗಳ ಪರಿಶೀಲನೆ ಹಾಗೂ ಅನರ್ಹ ಮತದಾರರನ್ನು ಗುರುತಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮುಂದಿನ ಕ್ರಮಗಳನ್ನು ಕೈಗೊಂಡಿತ್ತು. ಕರಡು ಪಟ್ಟಿ ಪ್ರಕಟವಾದ ದಿನದಿಂದ ಸೆಪ್ಟೆಂಬರ್ 23ರವರೆಗೆ ಸಾರ್ವಜನಿಕರಿಗೆ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.


43 ಲಕ್ಷ ಮತದಾರರಿಗೆ ನೋಟಿಸ್: ‘ಮತದಾರರ ದಾಖಲೆಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದ ಹಾಗೂ ಗುರುತು ದೃಢೀಕರಣ ಅಗತ್ಯವಿದ್ದ ಸುಮಾರು 43 ಲಕ್ಷಮತದಾರರಿಗೆ ನೋಟಿಸ್ ನೀಡಲಾಗಿತ್ತು.ಈ ಸಂಬಂಧ ವಿಚಾರಣೆಗಳನ್ನೂ ನಡೆಸಲಾಗಿದ್ದು, ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಹೆಸರು ಸೇರ್ಪಡೆಗಾಗಿ ಫಾರ್ಮ್-6 ಮತ್ತು ಹೆಸರು ತೆಗೆದುಹಾಕುವ ಪ್ರಕ್ರಿಯೆಗೆ ಸಂಬಂಧಿಸಿದ ಫಾರ್ಮ್-7 ಅಡಿಯಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ.
ಅಂತಿಮ ಪಟ್ಟಿಯೇ ನಿರ್ಣಾಯಕ:ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರ ದಾಖಲೆಗಳನ್ನು ನಿಖರಗೊಳಿಸುವುದಾಗಿದೆ. ಹೀಗಾಗಿ, ಅಕ್ಟೋಬರ್ 27ರಂದು ಪ್ರಕಟವಾಗುವ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪ್ರತಿಯೊಬ್ಬರೂ ಪರಿಶೀಲಿಸಿ ಕೊಳ್ಳುವುದು ಮುಖ್ಯ.ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಅ.22 ರವರೆಗೆ 2,28,917 ಫಾರಂ-7 ಅನ್ನು ಸ್ವೀಕರಿಸಲಾಗಿದೆ.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು 10,42,863 ಅರ್ಜಿ ನಮೂನೆ 6 ಸಲ್ಲಿಕೆಯಾಗಿದೆ. ಅದೇ ರೀತಿ ಮತದಾರರುತಮ್ಮ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಸರಿಪಡಿಸಲು 13,10,841 ಅರ್ಜಿ ನಮೂನೆ 8ಸಲ್ಲಿಕೆಯಾಗಿವೆ. 4,840 ಅನಿವಾಸಿ ಭಾರತೀಯಮತದಾರರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ರಾಜ್ಯದ ಒಟ್ಟು 60,923 ಮತಗಟ್ಟೆಗಳಿಗೆಸಂಬಂಧಿಸಿದಂತೆ 43,82,824 ನೋಟಿಸ್ಗಳನ್ನು ಮತದಾರರಿಗೆ ತಲುಪಿಸಲಾಗಿತ್ತು. ಅದರಂತೆ, ಎಲ್ಲ ನೋಟಿಸ್ಗಳ ವಿಚಾರಣೆಯನ್ನು ಅ.22ಕ್ಕೆ ಅನ್ವಯಿಸುವಂತೆಪೂರ್ಣಗೊಳಿಸಲಾಗಿದೆ.
ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಲಿದೆಎಂದು ಪ್ರಕಟಣೆ ತಿಳಿಸಿದೆ.








