ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

0

ಬಾರ್ಯ: ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ” ತೆನೆ ಮುಹೂರ್ತ, ನವರಾತ್ರಿ ಪೂಜೆ – ಹೊಸಕ್ಕಿ ನೈವೇದ್ಯ ಸಮರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಕ್ಷೇತ್ರದ ಭದ್ರಕಾಳಿ ಅಮ್ಮನವರಿಗೆ ನವರಾತ್ರಿಪೂಜೆಯು ಭಕ್ತಾದಿಗಳ ವಿವಿಧ ಸೇವೆ,,ಆಯುಧ ಪೂಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಶ್ರೀ ಮಹಾವಿಷ್ಣು ಮೂರ್ತಿ ದೇವರಿಗೆ ವಿವಿಧ ರೀತಿಯ ಸೇವೆ, ಹೊಸಕ್ಕಿ” ನೈವೇದ್ಯದೊಂದಿಗೆ ಮಹಾಪೂಜೆ ನಡೆಯಿತು. ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ,ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ , ಉಲ್ಲಾಸ್ ಪಾಂಗಣ್ಣಾಯ, ಗಣೇಶ್ ನೂರಿತ್ತಾಯ, ರಾಜೇಶ್ ರಾವ್ ಬಾರ್ಯ ವಿವಿಧ ಧಾರ್ಮಿಕ ಕಾರ್ಯದಲ್ಲಿ ಸಹಕರಿಸಿದರು,

ಟ್ರಸ್ಟ್ ಉಪಾಧ್ಯಕ್ಷ ನಾರಾಯಣಗೌಡ, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಶೇಷಪ್ಪ ಸಾಲಿಯಾನ್, ಟ್ರಸ್ಟಿಗಳಾದ ವಿದ್ಯಾ ಪ್ರಭಾಕರ್, ಪ್ರಶಾಂತ್ ಕುಮಾರ, ಮನೋಹರ್ ಶೆಟ್ಟಿ,ಪ್ರವೀಣ್ ಎಂ, ಶಿವರಾಮ ನಾಯ್ಕ,ಜಿ.ಉಮೇಶ, ರಾಮಣ್ಣಗೌಡ, ಮೋನಪ್ಪ ಗೌಡ, ಅರುಣ ಬಂಗೇರ, ವಿಶ್ವನಾಥ್ ಗೌಡ, ಚೇತನ್ ಕುಮಾರ್,ಬಾಲಕೃಷ್ಣ ಶೆಟ್ಟಿ, ಸುದರ್ಶನ್, ಸುದೇಶ್, ಶ್ರೀಮತಿ ನವೀನ, ವಿಜಯಲಕ್ಷ್ಮಿ ರೈ ನವರಾತ್ರಿ ಪರ್ಯಂತ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಪ್ರಚಾರ ಪ್ರಮುಖ ದಯಾನಂದ. ಪಿ, ಬೈಲುವಾರು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು, ಸ್ವಯಂಸೇವಕರು ಸಹಕರಿಸಿದರು.

LEAVE A REPLY

Please enter your comment!
Please enter your name here