ನವಶಕ್ತಿ ನಿವಾಸದ ಕಾಶಿವನಕ್ಕೆ ಸುದ್ದಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಯು.ಪಿ ಶಿವಾನಂದ ಭೇಟಿ : ದಿ. ಕಾಶಿ ಬಾಬು ಶೆಟ್ಟಿ ಅವರ ಪುತ್ಥಳಿಗೆ ಗೌರವ ನಮನ

0

ಗುರುವಾಯನಕೆರೆ: ಶಕ್ತಿನಗರದ ನವಶಕ್ತಿ ನಿವಾಸದಲ್ಲಿ ನವಶಕ್ತಿ ಕುಟುಂಬದ ಮಾತೃಶ್ರೀ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಿರ್ಮಿಸಲಾದ ಸ್ಮಾರಕ ‘ಕಾಶಿವನ’ಕ್ಕೆ ಅ.22ರಂದು ಸುದ್ದಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಯು.ಪಿ. ಶಿವಾನಂದ್ ಅವರು ಭೇಟಿ ನೀಡಿ, ದಿವಂಗತ ಶ್ರೀಮತಿ ಕಾಶಿ ಬಾಬು ಶೆಟ್ಟಿ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಶಿ ಬಾಬು ಶೆಟ್ಟಿ ಅವರ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.ಈ ಸಂದರ್ಭ ಸುದ್ದಿ ಬಿಡುಗಡೆ ಬೆಳ್ತಂಗಡಿಯ ಸಿಇಒ ಸಿಂಚನಾ ಉರುಬೈಲ್ ಹಾಗೂ ಸುದ್ದಿ ನ್ಯೂಸ್ ಚಾನೆಲ್‌ನ ಪ್ರೊಡಕ್ಷನ್ ಹೆಡ್ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here