






ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸಿ ಮೀನಿನ ಏಲಂ (ಹರಾಜು)ಗೆ ಸಂಬಂಧಿಸಿದಂತೆ ಚರ್ಚಿಸಲು ಹಾಗೂ ಸಮಸ್ಯೆಗಳ ಸಾಧಕ-ಬಾಧಕಗಳನ್ನು ಅರಿಯಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಳಿಯ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಭವಾನಿ ಶಂಕರ್ ಅವರು ಅ.22ರಂದು ಮೀನು ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞಿ ಕೆ., ಸಿಬ್ಬಂದಿ ರವಿ ಎಚ್. ಉಪಸ್ಥಿತರಿದ್ದರು.









