






ಮಂಜೊಟ್ಟಿ: ತುಳುನಾಡ್ ಆಟೋ ರಿಕ್ಷಾ ನಿಲ್ದಾಣ ಮಂಜೊಟ್ಟಿ ಇದರ ಮಹಾಸಭೆಯು ಅಕ್ಟೋಬರ್ 17, 2026ರಂದು ಶನಿವಾರದಂದು ಮಂಜೊಟ್ಟಿಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಮಹಾಸಭೆಯಲ್ಲಿ ಸಂಘದ ಹಿರಿಯ ಚಾಲಕರಾದ ಜೋಕ್ಕಿಂ ರೋಡ್ರಿಗಸ್ ಇವರನ್ನು ಸಂಘದ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್. ಆದಂ ಸಾಹೇಬ್ ಮಂಜೊಟ್ಟಿ ಹಾಗೂ ಬದ್ರುದ್ದಿನ್ ಪಾರ್ನಡ್ಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.


ಸಭೆಯ ಪ್ರಮುಖ ಹಂತದಲ್ಲಿ ಸಂಘದ ಮುಂದಿನ ಚಟುವಟಿಕೆಗಳಿಗಾಗಿ ನೂತನ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು.
ನೂತನ ಪದಾಧಿಕಾರಿಗಳ ವಿವರ:ಅಧ್ಯಕ್ಷರಾಗಿ : ಜಯಂತ (ಶ್ರೀ ದೇವಿ ಆಟೋ)ಉಪಾಧ್ಯಕ್ಷರಾಗಿ : ಜೋಕಿಮ್ ರೋಡ್ರಿಗಸ್ಪ್ರಧಾನ ಕಾರ್ಯದರ್ಶಿ: ಅತಿಬ್ ಕೊಲ್ಲೊಟ್ಟುಜೊತೆ ಕಾರ್ಯದರ್ಶಿ: ಮಾರ್ಕ್ ಡಿ ಸೋಜಾ (ಅಜಯ ನಗರ)ಕೋಶಾಧಿಕಾರಿ: ಪ್ರಕಾಶ್ ಪಿರೇರಾಕಾರ್ಯಕಾರಿ ಸಮಿತಿ ಸದಸ್ಯರು:ಅಬ್ದುಲ್ ರಝಾಕ್ಝಾಕೀರ್ ಹುಸೇನ್ಶಬ್ಬೀರ್ ಕೊಲ್ಲೊಟ್ಟುಪ್ರವೀಣ್ ಪಿಂಟೋರಝಾಕ್ (ಚಿಸ್ತಿ ಆಟೋ)ಗಫೂರ್ ಮಂಜೊಟ್ಟಿಇಸ್ಮಾಯಿಲ್ (ಸ್ವಾಗತ್ ಆಟೋ)ಹೊಸದಾಗಿ ಆಯ್ಕೆಯಾದ ನೂತನ ಸಮಿತಿಯ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.









