






ಉರುವಾಲು ಪದವು: ಶಿವಾಜಿ ನಗರದ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ತೆನೆ ತುಂಬಿಸುವ ಕಾರ್ಯಕ್ರಮ ಅ.20 ರಂದು ವಿಜೃಂಭಣೆಯಿಂದ ನಡೆಯಿತು.


ಬೆಳಿಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ ಹಾಗೂ ವಾಹನ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.









