








*ಬಳ್ಳಮಂಜ : ಬ್ರಹ್ಮ ಕಲಶ ಹಾಗು ಜೀರ್ಣೋದ್ದಾರದ ಲೆಕ್ಕಪತ್ರಗಳ ಮಂಡನೆ ಹಾಗು ಕಂಬಳದ ಪೂರ್ವಭಾವಿ ಸಭೆ ಬಳ್ಳಮಂಜ ಶ್ರೀಅನಂತೆ ಶ್ವರ ಸ್ವಾಮಿ ದೇವಸ್ಥಾನಲ್ಲಿ ಅ.18ರಂದು ಗ್ರಾಮಸ್ಥರು ಹಾಗು ಭಕ್ತಾದಿಗಳ ಸಮಕ್ಷಮದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಬ್ರಹ್ಮ ಕಲಶ ಹಾಗು ಜೀರ್ಣೋದ್ದಾರಕ್ಕೆ ತಗಲಿದ ಖರ್ಚು ವೆಚ್ಚಗಳನ್ನು ವಿವರವಾಗಿ ಓದಿ ಹೇಳಲಾಯಿತು.ಭಕ್ತಾದಿಗಳಿಂದ ಒಟ್ಟು ರೂ. 21182809/- ಸಂಗ್ರಹಣೆ ಅಗಿದ್ದು ರೂ. 20832010/- ಖರ್ಚು ತಗಲಿದ್ದು ರೂ. 350799/-ಲಕ್ಷ ಉಳಿಕೆಯಾಗಿರುತ್ತದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರರು ಜೀರ್ಣೋದ್ದಾರ ಹಾಗು ಬ್ರಹ್ಮ ಕಲಶಕ್ಕೆ ಅಹರ್ನಿಷಿ ದುಡಿದ ಎಲ್ಲ ಭಜಕರಿಗೆ ಹಾಗು ದೇಣಿಗೆ ನೀಡಿದ ಎಲ್ಲಾ ಊರ ಪರ ಊರ ಭಕ್ತಾದಿಗಳಿಗೆ ಅಭಿನಂದನೆ ಸಲ್ಲಿಸುತ್ತಾ ತಿಳಿಸಿದರು. ಸಮಿತಿಯ ಅಧ್ಯಕ್ಷ ವಸಂತ ಮರಕಡ ಮಾತನಾಡಿ ಜೀರ್ಣೋದ್ದಾರದ ಕೆಲಸ ಕಾರ್ಯಗಳಿಗೆ ಭಕ್ತರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮೋನಪ್ಪ ಪೂಜಾರಿ ಕoಡೆತ್ಯಾರ್, ದುಗಪ್ಪ ಗೌಡ ಪೋಸಂದೋಡಿ, ನಂದ ಕುಮಾರ್ ಪುಂಜಾಲಕಟ್ಟೆ, ಚಂದ್ರಕಾಂತ ನಿಡ್ಡಾಜೆ, ಪದ್ಮನಾಭ ಸುವರ್ಣ ಬೆರ್ಬಲಜೆ, ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ತುಳಸಿದಾಸ್ ಪೈ ಮಡಂತ್ಯಾರ್ ವಂದಿಸಿದರು.









