






ವೇಣೂರು : ನಿಟ್ಟಡೆ ಗ್ರಾಮದ ಕುಕ್ಕೇಡಿಗುತ್ತು ನಿವಾಸಿ, ನಡುಗುತ್ತು ಜಿನ್ನಪ್ಪ ಕಡಂಬ(92 ವ.) ಅವರು ಅ.19ರಂದು ವಯೋಸಹಜವಾಗಿ ನಿಧನರಾದರು.
ಎಸ್.ಡಿ.ಎಂ ಲಾ ಕಾಲೇಜಿನ ಫೌಂಡರ್ ಪ್ರಿನ್ಸಿಪಾಲ್, ಹಿರಿಯ ವಕೀಲರಾಗಿರುವ ಇವರ ಸಲಹೆ ಹಾಗೂ ಮಾರ್ಗದರ್ಶನದಿಂದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಕೀಲರುಗಳು ನ್ಯಾಯಾಧೀಶರಾಗಿದ್ದಾರೆ.


ಬೆಳ್ತಂಗಡಿಯಲ್ಲಿ ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಲಾ ಪ್ರಾಕ್ಟೀಷನರ್ ಆಗಿದ್ದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಮಕ್ಕಳಾದ ವಂದನಾ, ಸವಿತಾ, ಡಾ. ಮೃಣಾಳಿನಿ, ವನಿತಾ ಬಲ್ಲಾಳ್, ಪ್ರವೀಣ್ ಅಜ್ರಿ, ಶರ್ಮಿಳಾ ಅವರನ್ನು ಅಗಲಿದ್ದಾರೆ.









