






ಬಂದಾರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇವರ ವತಿಯಿಂದ “ವ್ಯಸನಮುಕ್ತ ಮತ್ತು ಕ್ಷಯ ಮುಕ್ತ ಯುವ ಜನತೆ” ಎಂಬ ಆಶಯದೊಂದಿಗೆ ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಅ. 18ರಿಂದ 24ರವರೆಗೆ ನಡೆಯಲಿರುವ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಅ.19 ರಂದು ನೆರವೇರಿತು.


ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಪೊಯ್ಯೋಲೆ ಅವರು ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.ಬೆಳ್ತಂಗಡಿ ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಪ್ರೊ. ಪದ್ಮನಾಭ ಕೆ ಅವರು ಮಾತನಾಡಿ ಶಿಬಿರದ ಉದ್ದೇಶ, ಶಿಬಿರಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿ ಶುಭಹಾರೈಸಿದರು.ಸ.ಪ್ರ.ದ. ಕಾಲೇಜು ಬೆಳ್ತಂಗಡಿಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ವಾಯ್ಲೆಟ್ ಮೊರಾಸ್, ಸ್ಥಳೀಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಮುಖ್ಯ ಶಿಕ್ಷಕ ವಿಶ್ವನಾಥ ಎಂ.ಯು. ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಶಿಬಿರಾಧಿಕಾರಿಗಳಾದ ಡಾ. ಕುಶಾಲಪ್ಪ ಎಸ್, ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯ ಪ್ರಭು, ಸುಮನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕು. ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಯಕ್ಷ ಸ್ವಾಗತಿಸಿದರು.









