






ಬೆಳ್ತಂಗಡಿ, ಅ. 18: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುನ್ನತ್ ಕೆರೆಯಲ್ಲಿ ಸುಮಾರು 35 ವರ್ಷಗಳಿಂದ ಡಾಮರೀಕರಣ ಕಾಣದೆ ಇದ್ದ ರಸ್ತೆಯ ಡಾಮರೀಕರಣ ಹಾಗೂ ನೂತನವಾಗಿ ನಿರ್ಮಿಸಲಾದ ಚರಂಡಿಯ ಉದ್ಘಾಟನಾ ಕಾರ್ಯಕ್ರಮವು ಎಸ್‌ಡಿಪಿಐ ಸುನ್ನತ್ ಕೆರೆ ಬ್ರಾಂಚ್ ಸಮಿತಿಯ ವತಿಯಿಂದ ನಡೆಯಿತು.


ಕುವೆಟ್ಟು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯರಾದ ಮುಸ್ತಫಾ ಜಿ.ಕೆ. ಅವರ ನೇತೃತ್ವದಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ ರಸ್ತೆ ಡಾಮರೀಕರಣ ಮತ್ತು ನೂತನ ಚರಂಡಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಅವರು ರಸ್ತೆ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ, ಕಾರ್ಯದರ್ಶಿ ಶಮೀರ್, ಉದ್ಯಮಿಗಳಾದ ಶಂಸು ಐ.ಜಿ., ಹಾರಿಸ್ ಜಿ.ಎಸ್.ಕೆ., ಅಶ್ರಫ್, ಅಬ್ಬಾಸ್ ಹಾಜಿ, ಸಾದಿಕ್ ಸಾಹೇಬ್ ಹಾಗೂ ಅಬ್ದುಲ್ ಹಮೀದ್ ಹಾಜಿ ಉಪಸ್ಥಿತರಿದ್ದರು.ಎಸ್‌ಡಿಪಿಐ ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ, ಕಾರ್ಯದರ್ಶಿ ರಫೀಕ್ ಕೆ. ಕಟ್ಟೆ, ಸುನ್ನತ್ ಕೆರೆ ಬ್ರಾಂಚ್ ಅಧ್ಯಕ್ಷ ಕಲಂದರ್, ಕಾರ್ಯದರ್ಶಿ ಫಯಾಝ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.









