ಬೆಳ್ತಂಗಡಿ ಯುವಕರಿಂದ 8ನೇ ವರ್ಷದ ಸಪ್ತಮಾತೃಕಾ ದರ್ಶನ ಯಾತ್ರೆ; 27 ಮಂದಿ ಭಾಗಿ

0

ಬೆಳ್ತಂಗಡಿ: ಭಕ್ತಿ, ಶಕ್ತಿ ಮತ್ತು ಸಂಸ್ಕೃತಿಯ ಪಯಣವಾಗಿ ಬೆಳ್ತಂಗಡಿಯ ಯುವಕರ ತಂಡದಿಂದ 8ನೇ ವರ್ಷದ ಸಪ್ತಮಾತೃಕಾ ದರ್ಶನ ಯಾತ್ರೆ ನಡೆಯಿತು.

ಧಾರ್ಮಿಕ ಪರಂಪರೆ, ಶಕ್ತಿ ಆರಾಧನೆ ಹಾಗೂ ಸನಾತನ ಸಂಸ್ಕೃತಿಯ ಮಹತ್ವವನ್ನು ಸಾರುವ ಈ ಪವಿತ್ರ ಯಾತ್ರೆಯಲ್ಲಿ 27 ಮಂದಿ ಪಾಲ್ಗೊಂಡರು.

ಯಾತ್ರೆಯ ಅಂಗವಾಗಿ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುಂಜಾರಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಯಾತ್ರೆಯಲ್ಲಿ ಮಂಜುನಾಥ್ ಎಂ., ಅರವಿಂದ, ಸ್ವಸ್ತಿಕ್, ರವಿ ಕುಮಾರ್, ನವೀನ್ ಹೆಗ್ಡೆ, ಹರಿಕೃಷ್ಣ ಲಾಯಿಲ, ಪ್ರಕಾಶ್ ಆಚಾರ್ಯ, ಪ್ರತೀಶ್ ಪೆರಿಂಜೆ, ಗಣೇಶ್ ಲಾಯಿಲ, ಅವಿ ಹೊಸಮಟ, ಶರತ್ ಶೆಟ್ಟಿ, ಗಿರೀಶ್, ಸುಧೀರ್ ಚಾರ್ಮಾಡಿ, ಚಂದ್ರಕಾಂತ್ ಲಾಯಿಲ, ಗಣೇಶ್ ಶೆಟ್ಟಿ, ಕರುಣಾಕರ, ಪವನ್, ರಿಜಿ ಗುರುವಾಯನಕೆರೆ, ಶಶಿರಾಜ ಶೆಟ್ಟಿ, ಜಗದೀಶ್ ಕನ್ನಾಜೆ, ಗಿರೀಶ್ ಗೌಡ ಬಂದಾರ್, ಶ್ರದ್ದೇಶ್ ಲಾಯಿಲ, ಸುಜಿತ್ ಲಾಯಿಲ, ಪ್ರಶಾಂತ್ ರಾಮಗಿರಿ, ಪುಷ್ಪರಾಜ್ ಶೆಟ್ಟಿ, ಪ್ರಜಿತ್ ಕೊಯ್ಯೂರು ಹಾಗೂ ಅನಿಲ್ ನ್ಯಾಯವಾದಿಗಳು ಪಾಲ್ಗೊಂಡಿದ್ದರು.

ಸತತ ಎಂಟನೇ ವರ್ಷವೂ ಯಾತ್ರೆಯನ್ನು ಮುಂದುವರಿಸುವ ಮೂಲಕ ಬೆಳ್ತಂಗಡಿಯ ಯುವಕರು ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಭಕ್ತಿಭಾವದಿಂದ ನಡೆದ ಈ ಯಾತ್ರೆಯು ಯುವಜನತೆಯಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮತ್ತಷ್ಟು ಬಲಪಡಿಸಿತು.

LEAVE A REPLY

Please enter your comment!
Please enter your name here