ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್ ನಲ್ಲಿ ಸ್ನ್ಯಾಪ್ ಡ್ರಾ ಸಾಫ್ಟ್‌ವೇ‌ರ್ ಉದ್ಘಾಟನೆ

0

ಬೆಳ್ತಂಗಡಿ : ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನಲ್ಲಿ ವಿಶ್ವಾಸ್‌ ಸಾಫ್ಟ್‌ವೇ‌ರ್ ಅಭಿವೃದ್ಧಿಪಡಿಸಿದ ಸ್ನ್ಯಾಪ್‌ಡ್ರಾ (SnapDraw) ಯೋಜನಾ ನಿರ್ವಹಣಾ ಸಾಫ್ಟ್‌ವೇ‌ರ್ ಉದ್ಘಾಟಿಸಲಾಯಿತು.

ಯೋಜನೆಯ ಸದಸ್ಯರಿಗೆ ಪ್ರತ್ಯೇಕ ಸ್ವಯಂ ನಿರ್ವಹಣಾ ಪೋರ್ಟಲ್ ಒದಗಿಸುವ ಈ ಸಾಫ್ಟ್‌ವೇ‌ರ್ ಅಳವಡಿಸಿಕೊಂಡ ಬೆಳ್ತಂಗಡಿ ತಾಲೂಕಿನ ಮೊದಲ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶೋರೂಂ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಲ್ಲೋನ್ಸ್ ಫ್ರಾಂಕೋ ಅವರ ಮುಂದಾಳತ್ವದಲ್ಲಿ ಈ ಸಾಫ್ಟ್‌ವೇ‌ರ್ ಅಳವಡಿಸಲಾಗಿದೆ.

ಸದಸ್ಯರು ತಮ್ಮ ಯೋಜನೆಯ ವಿವರಗಳನ್ನು ನಿರ್ವಹಿಸಲು, ಕಂತುಗಳನ್ನು ಪರಿಶೀಲಿಸಲು, ಆನ್‌ಲೈನ್ ಮೂಲಕ ಹಣ ಪಾವತಿಸಲು, ವಿಜೇತರ ಇತಿಹಾಸ ವೀಕ್ಷಿಸಲು ಹಾಗೂ ಅಧಿಸೂಚನೆಗಳನ್ನು ಪಡೆಯಲು ಈ ಪೋರ್ಟಲ್ ಸಹಕಾರಿಯಾಗಿದೆ.

ಕಾರ್ಯಕ್ರಮವನ್ನು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯ ವ್ಯವಸ್ಥಾಪಕ ವೆಂಕಟೇಶ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಮನೋಹ‌ರ್ ಬಳೆಂಜ ಹಾಗೂ ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನ ಮ್ಯಾನೇಜ‌ರ್ ಲ್ಯಾನ್ಸಿ ಡಿ ಸೋಜಾ, ಪಿ.ಆ‌ರ್.ಓ ಅಬ್ದುಲ್ ಖಾದ‌ರ್, ಅಮೀನ ಬಿ ಶಭಾನಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

31 ವರ್ಷಗಳ ಗ್ರಾಹಕ ಸೇವೆಯ ಅನುಭವ ಹೊಂದಿರುವ ಸೋಜಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್, ಗ್ರಾಹಕರ ಅನುಭವವನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ವಿಶ್ವಾಸ್‌ ಸಾಫ್ಟ್‌ವೇರ್‌ನ ಡೆವಲಪರ್ ರಂಜಿತ್ ಅವರ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾದ ಸ್ನ್ಯಾಪ್‌ಡ್ರಾ, ಸ್ಥಳೀಯ ಉದ್ಯಮಗಳಿಗೆ ತಂತ್ರಜ್ಞಾನದ ಮೂಲಕ ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಪ್ರಯತ್ನವಾಗಿದೆ.

ಈ ಹೊಸ ಪ್ರಯತ್ನಕ್ಕೆ ವಿಶ್ವಾಸ್‌ ಸಾಫ್ಟ್‌ವೇ‌ರ್ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡಿದ ಅಲ್ಫೋನ್ಸ್ ಫ್ರಾಂಕೋ ಅವರಿಗೆ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here