ನಾಳೆ ಪ್ರವೀಣ್ ಕ್ಯಾಪಿಟಲ್‌ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ

0

ಪುತ್ತೂರು: ಪುತ್ತೂರಿನಲ್ಲಿ ಹಣಕಾಸು ಸೇವಾ ಕ್ಷೇತ್ರದಲ್ಲಿ 1994 ರಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಸಂಸ್ಥೆಯಾಗಿ, ಉತ್ತಮ ಸೇವೆಯೊಂದಿಗೆ ಕಲ್ಲಾರೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ಪ್ರಧಾನ ಕಚೇರಿ ನವೀಕೃತಗೊಂಡು ಅ.16ರಂದು ಉದ್ಘಾಟನೆಗೊಳ್ಳಲಿದೆ.

ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಮಾಲಕ ಜಿ.ಎಲ್. ಬಲರಾಮ ಆಚಾರ್ಯ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಾಗವಹಿಸಲಿದ್ದಾರೆ.1994ರಲ್ಲಿ ಆರಂಭಗೊಂಡಿರುವ ಪ್ರವೀಣ್ ಕ್ಯಾಪಿಟಲ್, ಗ್ರಾಹಕರ ಬೆಂಬಲ ಮತ್ತು ವಿಶ್ವಾಸದೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ.

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯ ಮಂಗಳೂರು, ಮೂಡಬಿದಿರೆ, ಚಿಕ್ಕಮಗಳೂರು, ಶಿರಸಿ, ಮಡಿಕೇರಿ, ಸಕಲೇಶಪುರ, ಮೈಸೂರು, ಶಿವಮೊಗ್ಗ, ಹಾವೇರಿ, ದಾವಣಗೆರೆ, ಸಾಗರ, ಬೆಳ್ತಂಗಡಿ, ಗೋಣಿಕೊಪ್ಪಲ್, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಕುಂದಾಪುರ, ಹುಣಸೂರು, ಚೆನ್ನರಾಯಪಟ್ಟಣ, ಕೊಪ್ಪ, ತುಮಕೂರು, ದೊಡ್ಡಬಳ್ಳಾಪುರ, ವಿಜಯಪುರದಲ್ಲಿ ಶಾಖೆಗಳನ್ನು ಹೊಂದಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉzಶದಿಂದ ಪ್ರಧಾನ ಕಚೇರಿಯನ್ನು ನವೀಕರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್, ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೋಘ್ ಜೆ. ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾ, ದೀಪಾವಳಿ ಆಫರ್ ಆಯೋಜನೆದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಸಂಸ್ಥೆಯಲ್ಲಿ ವಿಶೇಷ ಆಫರ್ ಆಯೋಜಿಸಲಾಗಿದೆ. ಅಕ್ಟೋಬರ್ 1ರಿಂದ ಆರಂಭಗೊಂಡಿರುವ ಆಫರ್ ನವೆಂಬರ್ 30ರವರೆಗೆ ಲಭ್ಯವಿದೆ. ಗರಿಷ್ಠ ಹಣಕಾಸಿನ ನೆರವು, ಸುಲಭ ಸಾಲ ಸೌಲಭ್ಯ, ಶೀಘ್ರ ಅನುಮೋದನೆ ವ್ಯವಸ್ಥೆಯೊಂದಿಗೆ, ಸಾಲ ಪಡೆಯುವ ಗ್ರಾಹಕರಿಗೆ ಅದೃಷ್ಟ ಕೂಪನ್ ನೀಡಲಾಗುವುದು.

ಕೂಪನ್ ಲಕ್ಕಿ ಡ್ರಾದಲ್ಲಿ ಸ್ಮಾರ್ಟ್ ಟಿವಿ, ಫ್ರಿಡ್ಜ್, ಮುಂತಾದ ಅನೇಕ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣಾವಕಾಶ ಗ್ರಾಹಕರಿಗೆ ಲಭ್ಯವಿದೆ.

LEAVE A REPLY

Please enter your comment!
Please enter your name here