






ಕಳೆಂಜ: ಕಳೆಂಜ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಮಂಡಳಿ ಸಭೆಯು ಇಲ್ಲಿನ ಉಮಾಮಹೇಶ್ವರ ದೇವಸ್ಥಾನದ ಶಿವಪಾರ್ವತಿ ಸಭಾಭವನದಲ್ಲಿ ನಡೆಯಿತು.
ಪಶುವೈದ್ಯಾಧಿಕಾರಿ ಹಾಗೂ ಕಳೆಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಯತೀಶ್ ಎಂ.ಎಸ್. ಅವರು ದೀಪ ಪ್ರಜ್ವಲಿಸಿ ಸಭೆಯನ್ನು ಉದ್ಘಾಟಿಸಿದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೆಚ್.ಪಿ. ಅವರು ಅರಣ್ಯದ ಮಹತ್ವದ ಕುರಿತು ವಿವರಿಸಿದರು.


ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಆನಂದ ಗೌಡ ಮರಕ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸಿದ ಮೋಹನ್ ಮಿಯಾರು ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ಹಾಗೂ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ವರದಿ ಮಂಡಿಸಿದರು.ಅರಣ್ಯ ರಕ್ಷಕ ಸಚಿನ್, ಮಾಜಿ ಪಂಚಾಯತ್ ಸದಸ್ಯ ಹರೀಶ್ ಕೊಯಿಲ, ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಕುಲಾಡಿ, ಕಾರ್ಯಕಾರಿಣಿ ಸದಸ್ಯರಾದ ಪುಷ್ಪ ಬೊಟ್ಟು, ಪ್ರಸನ್ನ ಮಾಣಿಗೆರಿ, ಗಿರಿಜ ನಿಡ್ದಾಜೆ, ಸುಶೀಲಾ ಮುಡ್ಯಲಗುರಿ ಹಾಗೂ ವಿಶ್ವನಾಥ ಕುಂಟ್ಯಾನ ಉಪಸ್ಥಿತರಿದ್ದರು.
ನಿತ್ಯಾನಂದ ರೈ ಗುತ್ತಿಮಾರ್ ಸ್ವಾಗತಿಸಿದರು. ಶ್ರೀಧರ್ ಉದ್ರಜೆ ಕಾರ್ಯಕ್ರಮ ನಿರೂಪಿಸಿದರು. ಜನಾರ್ಧನ ಕಲ್ಕಟ ವಂದಿಸಿದರು.









