






ಮಚ್ಚಿನ :ಸಾರ್ವಜನಿಕರಿಗೆ ಉಪಯೋಗಕ್ಕೆ ಬಸ್ ನಿಲ್ದಾಣಗಳು ಇದ್ದರೇನು ಸ್ವಾಮಿ ಬಿಸಿಲು ಗಾಳಿ ಮಳೆ ಸಿಡಿಲು ಮಿಂಚು ಗುಡುಗೆ ಬರಲಿ ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ಬದಿಯಲ್ಲೇ ನಿಲ್ಲುವಂತಾಗಿದೆ.
ಇಷ್ಟೇ ಯಾಕೆ ಮಡಂತ್ಯಾರ್ ನಿಂದ ಉಪ್ಪಿನಂಗಡಿವರೆಗೆ ರಸ್ತೆಯಲ್ಲಿ ಸರತಿನ ಸಾಲಿನಂತೆ ಹೊಂಡಗಳ ಸುರಿಮಲೆ ಒಂದು ಕಡೆಯಾದರೆ ಬಸ್ ನಿಲ್ದಾಣದ ಪಕ್ಕದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಕೆಸರಿನ ಅಭಿಷೇಕವನ್ನು ಪಡೆಯುವ ಭಾಗ್ಯ ಸಾರ್ವಜನಿಕರಿಗೆ ಆಗಿದೆ. ಗಿಡ ಗಂಟಿ ಪೊದೆಗಳು ತುಂಬಿ ಕೆಲವು ಬಸ್ ನಿಲ್ದಾಣಗಳು ಮಾಯವಾಗಿದೆ.

ಮಚ್ಚಿನ ಗ್ರಾಮದ ಬಂಗೇರುಕಟ್ಟೆ ಬಸ್ ನಿಲ್ದಾಣ ಬಸ್ಸಿಗಿಂತಲೂ ಎತ್ತರದಲ್ಲಿ ಇದೆ ಗುಡ್ಡವೇರಿ ಹತ್ತಿ ಬಸ್ಸಿಗಾಗಿ ಕಾದರೆ ನಾವು ಬಸ್ ಬರುವ ಸಮಯದಲ್ಲಿ ಕೆಳಗೆ ಬಂದರೆ ಬಸ್ ಮಡಂತ್ಯಾರ್ ಗೆ ತಲುಪುತ್ತದೆ ಎನ್ನುತ್ತಾರೆ ಸಾರ್ವಜನಿಕರು.



ಕಾರಂದೂರು ಬಸ್ ನಿಲ್ದಾಣಗಳ ಒಳಗಡೆ ರಸ್ತೆ ನೀರು ಒಳ ನುಗ್ಗಿ ಕೆಸರು ತುಂಬಿ ಹೋಗಿದ್ದು ದಿನನಿತ್ಯ ಪಾಲಡ್ಕ ತಾರೆಮಾರು ಕಡೆಯಿಂದ ಬರುವ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆ ಬದಿಯಲ್ಲಿ ನಿಲ್ಲುವಂತಾಗಿದೆ ಅತಿಯಾದ ವಾಹನಗಳ ಓಡಾಟ ಒಂದು ಕಡೆಯಾದರೆ ತನ್ನ ಜೀವದ ಭಯ ಇನ್ನೊಂದು ಕಡೆಯಾಗಿದೆ.
ದಿನನಿತ್ಯ ಈ ರಸ್ತೆಯಲ್ಲಿ ಅಧಿಕಾರಿಗಳು ಸಂಚರಿಸಿದರು ಕಣ್ಣಿಗೆ ಕಾಣದಂತೆ ಹೋಗುತ್ತಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು ಕಾರಂದೂರು ಅಪಾಯಕಾರಿ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಮೂಲ ಸೌಕರ್ಯಗಳನ್ನು ಒಳಗೊಂಡ ಬಸ್ ನಿಲ್ದಾಣಗಳ ಅಗತ್ಯವಿದೆ. ಮತ್ತು ನೆರೋಳ್ ಪಲ್ಕೆ ಬಸ್ ನಿಲ್ದಾಣ ಪೊದೆಗಳು ತುಂಬಿ ಮಾಯವಾಗಿದೆ.
ಕುದ್ರಡ್ಕ ಬಸ್ ನಿಲ್ದಾಣದಲ್ಲಿ ಯಾವುದೇ ಮೂಲಸೌಕರ್ಯಗಳು ಇಲ್ಲದೆ ಕಸಗಳ ರಾಶಿ ರಾಶಿಯಿಂದ ಒಳಗಡೆ ನಿಂತುಕೊಳ್ಳದ ಸ್ಥಿತಿಯಾಗಿದೆಮಚ್ಚಿನ ಗ್ರಾಮದ ಎಲ್ಲಾ ಬಸ್ ನಿಲ್ದಾಣಗಳಿಗೆ ಮರುಜೀವ ತುಂಬ ಬೇಕಾಗಿದೆ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಉಪಯೋಗಿಸುವಂತಾಗಲಿ ಅಪಾಯಕಾರಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ ಸುಂದರ ನಿಲ್ದಾಣ ನಿರ್ಮಾಣವಾಗಲಿ ಪ್ರಯಾಣಿಕರಿಗೆ ಬಿಸಿಲು ಗಾಳಿ ಮಳೆಗೆ ವಿಶ್ರಾಂತಿ ಪಡೆಯಲು ದುರಸ್ತಿ ಕಾರ್ಯ ಅಗತ್ಯವಾಗಿದೆ ಇನ್ನಾದರೂ ನಮ್ಮ ಕೂಗು ಗ್ರಾಮದ ಅಧಿಕಾರಿಗಳಿಗೆ ಕಿವಿ ಮುಟ್ಟಲಿ ಎನ್ನುತ್ತಾರೆ ಗ್ರಾಮಸ್ಥರು
✍️ವರದಿ. ಹರ್ಷ ಬಳ್ಳಮಂಜ









