






ತೋಟತ್ತಾಡಿ: ಶ್ರೀ ಉಳ್ಳಾಳ್ತಿ ಭಜನಾ ಮಂದಿರ ಆರಂತಬೈಲು, ತೋಟತ್ತಾಡಿ ಇಲ್ಲಿ 11ನೇ ವರ್ಷದ ನವರಾತ್ರಿ ಭಜನಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ಉದ್ಘಾಟನೆಗೊಂಡಿತು.ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಇರ್ವತ್ರಾಯ ಬೆಂದ್ರಾಳ ಅವರು ದೀಪ ಬೆಳಗಿಸಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಈ ಧಾರ್ಮಿಕ ಸಮಾರಂಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಹಾರಗಂಡಿ, ಅಧ್ಯಕ್ಷರಾದ ಹರೀಶ್ ಶೆಟ್ಟಿ ಅರಮನೆ, ಕಾರ್ಯದರ್ಶಿ ನಾರಾಯಣ್ ಶೆಟ್ಟಿ ಕುಡೆಂಚ, ಉಪಾಧ್ಯಕ್ಷರಾದ ಸನತ್ ಕುಮಾರ್ ಮೂರ್ಜೆ, ಸತೀಶ್ ಪೂಜಾರಿ ಮೂರ್ಜೆ, ಜೊತೆ ಕಾರ್ಯದರ್ಶಿ ದಿವಾಕರ್ ಪೂಜಾರಿ ಪರಪಿತ್ತಿಲು, ನವರಾತ್ರಿ ಸಮಿತಿ ಅಧ್ಯಕ್ಷರಾದ ದಿವಾಕರ್ ಪೂಜಾರಿ ಡಿ.ಮಜಲು, ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮೂರ್ಜೆ ಹಾಗೂ ದಿನೇಶ್ ನಾಯ್ಕ್ ಕೋಟೆ ಉಪಸ್ಥಿತರಿದ್ದರು.









