ಉಜಿರೆಯಲ್ಲಿ ಹುಲಿವೇಷ ಸಂಭ್ರಮ: ಟೀಮ್ ಕಲಾಟಿಯನ್ ಟೈಗರ್ಸ್ ವತಿಯಿಂದ ಊದು ಪೂಜೆ ಸಂಪನ್ನ, ಇಂದು ಅದ್ದೂರಿ ಪ್ರದರ್ಶನ

0

ಉಜಿರೆ, ಅ.11: ದಸರಾ ಹಬ್ಬದ ಪ್ರಯುಕ್ತ ಟೀಮ್ ಕಲಾಟಿಯನ್ ಟೈಗರ್ಸ್ ವತಿಯಿಂದ ಉಜಿರೆ ಜನಾರ್ದನ ದೇವಸ್ಥಾನದ ವಠಾರದಲ್ಲಿ ಊದು ಪೂಜಾ ಕಾರ್ಯಕ್ರಮ ಅ. 11ರಂದು ರಾತ್ರಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪುತ್ತೂರು ಸಹಜ್ ರೈ ಅವರು, “ಹುಲಿವೇಷ ಹಾಕುವುದು ಸುಲಭವಲ್ಲ, ಅದರ ಕಷ್ಟ ಸಂಘಟಕರಿಗೆ ಗೊತ್ತು. ಹುಲಿವೇಷ ಕೇವಲ ಮನರಂಜನೆಯಲ್ಲ, ಅದು ನಮ್ಮ ಪರಂಪರೆ, ಸಂಸ್ಕೃತಿ ಉಳಿಸುವ ಕೆಲಸ. ಯುವಕರ ಈ ಒಗ್ಗಟ್ಟು ಸೂರ್ಯ ಚಂದ್ರ ಇರುವವರೆಗೂ ಹೀಗೆ ಇರಲಿ” ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಕಿರಣ್ ಚಂದ್ರ ಪುಷ್ಪಗಿರಿ, ಮಂಜು ಬೆಂಗಳೂರು, ರಾಜೇಶ್ ಕಾರಂತ್, ಭಾಸ್ಕರ ಧರ್ಮಸ್ಥಳ, ಸಜಿ ರೈ, ಜಯಪ್ರಕಾಶ್, ಪೂರನ್ ವರ್ಮ, ರವಿ ಚಕ್ಕಿತ್ತಾಯ, ವಕೀಲ ಮುರಳಿ ಬಲಿಪ, ಪ್ರವೀಣ್ ಹಳ್ಳಿಮನೆ, ವರದಿಗಾರ ನಿಶಾನ್ ಬಂಗೇರ, ಅಹನ ನಾಯರ್, ವಿನ್ಯಾಶ್ ಬಂಡಾರಿ ಉಪಸ್ಥಿತರಿದ್ದರು. ವಿ.ಜೆ. ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು.

ಟೀಮ್ ಕಲಾಟಿಯನ್ ಟೈಗರ್ಸ್ ತಂಡದ ಅದ್ದೂರಿ ಹುಲಿವೇಷ ಪ್ರದರ್ಶನ ನಾಳೆ ಅ.12ರಂದು ಬೆಳಿಗ್ಗೆ 10 ಗಂಟೆಗೆ ಉಜಿರೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here