ಬೆಳ್ತಂಗಡಿ ಠಾಣಾ ಪೊಲೀಸರ ಕಾರ್ಯಾಚರಣೆ-ವಾರಂಟ್ ಆರೋಪಿ ರಿಜ್ವಾನ್ ಬಂಧನ

0

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯ ಸಿಸಿ ನಂಬ್ರ-2477/2025ರಂತೆ ಕಲಂ: 177,192,119,66,11(D),110,115(2) 132 r/w 3(5),281,345(3),7,5,12 of motor Vehicles Act,Prevention of Cruelty to Animals Act, Bartiya Nyay Sanhit, Karnataka Prevention of cow slaughter and Cattle preservation Actನಡಿ ದಾಖಲಾಗಿದ್ದ ಪ್ರಕರಣದ ಆರೋಪಿ ರಿಜ್ವಾನ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.

ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕ ರವಿ ಬಿ ಎಸ್ , ಉಪ ನೀರಿಕ್ಷಕರಾದ ಆನಂದ ಮತ್ತು ಸಿಕಂದರ್ ಪಾಷ ಅವರ ನಿರ್ದೇಶನದಲ್ಲಿ ಠಾಣಾ ವಾರೆಂಟ್ ಸಿಬ್ಬಂದಿಯವರು ಮೈಸೂರುನಲ್ಲಿ ರಿಜ್ವಾನ್‌ನನ್ನು ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ‌ ಬಂಧನ ವಿಧಿಸಿದೆ. ಬಂಧಿತ ರಿಜ್ವಾನ್‌ನನ್ನು ಮಂಗಳೂರು ಜಿಲ್ಲಾ‌ ಕಾರಾಗೃಹಕ್ಕೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here