ಗುರಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಭಾಂಗಣಕ್ಕೆ ರೂ. 1.50 ಲಕ್ಷ ಮಂಜೂರಾತಿ ಪತ್ರ ಹಸ್ತಾಂತರ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ವತಿಯಿಂದ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ವಲಯದ ಗುರಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣಕ್ಕೆ ಮಂಜೂರು ಮಾಡಿದ ರೂ. 1,50,000/- ಮೊತ್ತದ ಅಧಿಕೃತ ಮಂಜೂರಾತಿ ಪತ್ರವನ್ನು ಅ. 9 ರಂದು ವಿತರಿಸಲಾಯಿತು.​

ಇಂದಬೆಟ್ಟು ವಲಯಾಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಹಾಗೂ ವಲಯ ಮೇಲ್ವಿಚಾರಕರಾದ ಉಷಾ ಅವರು ಶಾಲಾ ಎಸ್‌ಡಿಎಂಸಿ (SDMC) ಅಧ್ಯಕ್ಷರಾದ ಶಾಂಭ ಶೆಟ್ಟಿಯವರಿಗೆ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.​

ಈ ಶುಭ ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ ಬನತ್ರೋಡಿ, ಸಾರ್ವಜನಿಕ

ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಭರತ್ ಪೂಜಾರಿ ಬ್ರಹ್ಮಸ, ಉಪಾಧ್ಯಕ್ಷ ಜಯರಾಮ್ ಪೂಜಾರಿ ಕೊಡೆಕ್ಕಲ್, ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಏನೀರು, ಶಾಲಾ ಸಹ ಶಿಕ್ಷಕಿ ಅಂಬಿಕಾ ಭಟ್, ಹಾಗೂ ಅಜಿತ್ ಎಂ. ಭಟ್ ಉಪಸ್ಥಿತರಿದ್ದರು.​ಹಾಗೆಯೇ ಒಕ್ಕೂಟದ ಪದಾಧಿಕಾರಿಗಳಾದ ಬಾಬು ಬಂಗೇರ, ನಾರಾಯಣ ಗೌಡ ಕೊಡ್ಡೋಲು, ಚಂದ್ರಕಲಾ ಕೇರಿಮಾರು, ವನಿತಾ ಬ್ರಹ್ಮಸ ಮತ್ತು ಸೇವಾಪ್ರತಿನಿಧಿ ಪುಷ್ಪಾವತಿ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

LEAVE A REPLY

Please enter your comment!
Please enter your name here