ಕ್ಯಾಂಪ್ಕೋದಿಂದ ಆರೋಗ್ಯ ದತ್ತ ನಿಧಿ ಚೆಕ್ ಹಸ್ತಾಂತರ: ಬೆಳ್ತಂಗಡಿ ತಾಲೂಕಿನ ಫಲಾನುಭವಿಗೆ ₹50,000 ಆರ್ಥಿಕ ನೆರವು

0

ಬೆಳ್ತಂಗಡಿ : ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯ ದತ್ತ ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ವೇಣೂರು ಶಾಖೆಯ ಸದಸ್ಯರಾದ, ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಈಶ್ವರ ಭಟ್ ಕೆ.ವೈಇವರ ಆಂಜಿಯೋಪ್ಲಾಸ್ಟಿ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ₹50,000/- ಮೊತ್ತದ ಚೆಕ್‌ನ್ನು ಅವರ ಸ್ವಗ್ರಹ ದಲ್ಲಿ ಅ.09 ರಂದು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ದಯಾನಂದ ಹೆಗ್ಡೆಯವರು ಫಲಾನುಭವಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಯಂ ಮತ್ತು ಕಾರ್ಕಳ ಶಾಖೆಯ ವ್ಯವಸ್ಥಾಪಕರಾದ ರಾಘವೇಂದ್ರ ಮಲ್ಯ ಹಾಗೂ ಬೈಕಂಪಾಡಿ ಶಾಖೆಯ ಅಶೋಕ್ ರವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here