






ಉಜಿರೆ : ಉಜಿರೆ ಗ್ರಾಮ ಪಂಚಾಯತಿನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಅ.9 ರಂದು ಗ್ರಾಮ ಪಂಚಾಯತ್ ಸುವರ್ಣ ಸೌಧ ಸಭಾ ಭವನದಲ್ಲಿ ಪಂಚಾಯತ್ ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಇವರು ಗ್ರಾಮ ಸಭೆಯ ಮುನ್ನಡೆಸಿದರು. ಸಭೆಯಲ್ಲಿ ಪಂಚಾಯತ್ ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಸಿಬ್ಬಂದಿ ವರ್ಗದವರು ಸಹಕರಿಸಿದರು. ಪಂಚಾಯತ್ ಅಭಿವೃದ್ಧಿ ರಾಘವೇಂದ್ರ ಪಾಟೀಲ್ ಸ್ವಾಗತಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ ಜಮಾ ಖರ್ಚು ವಾಚಿಸಿ, ಸಿಬ್ಬಂದಿ ರಮೇಶ್ ನಾಯ್ಕ ಅನುಪಾಲನಾ ವರದಿ ವಾಚಿಸಿ ಉಮೇಶ್ ಗೌಡ ನಿವೇಶನ ರಹಿತರ ವಿವರ ನೀಡಿದರು.
ಮೋಹನ್ ಹೆಚ್. ಬಿ. ನಳ್ಳಿ ನೀರು ಸಂಪರ್ಕದ ವಿವರ ನೀಡಿದರು.ಇಲಾಖೆಯ ಅಧಿಕಾರಿಗಳು ವಿವಿಧ ಇಲಾಖಾ ಮಾಹಿತಿ ನೀಡಿದರು.









