






ಬೆಳ್ತಂಗಡಿ; ಹಿರಿಯ ಕಾಂಗ್ರೆಸ್ ಮುಖಂಡ, ಚಾರ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಅರೆಕ್ಕಲ್ ಮಮ್ಮಿಕುಂಞಿ ಬಾವಾಕ(75) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.7 ರಂದು ಸ್ವಗೃಹ ಕಕ್ಕಿಂಜೆಯಲ್ಲಿ ನಿಧನರಾಗಿದ್ದಾರೆ.ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಕ್ಕಿಂಜೆ ಇದರ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿರುವ ಅವರು ಒಂದು ಅವಧಿಯಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು 10 ವರ್ಷಗಳ ಕಾಲ ಕಕ್ಕಿಂಜೆ ಸರಾಸರಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದರು


ಐದು ಅವಧಿಗೆ ಪಂಚಾಯತ್ ಸದಸ್ಯರಾಗಿದ್ದು, ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಈ ವೇಳೆ ಪಂಚಾಯತ್ ಗೆ ಸ್ವಚ್ಛ ಭಾರತ ಪುರಸ್ಕಾರ ಲಭಿಸಿದ್ದು ದೆಹಲಿಗೆ ತೆರಳಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ಮೃತರು ಪತ್ನಿ ಖತೀಜಮ್ಮ, ಮಕ್ಕಳಾದ ಸಿದ್ದೀಕ್, ಇಕ್ಬಾಲ್, ಶಕೀಲ್, ಸಾದಿಕ್, ಮೈಮುನಾ, ಸಾಯಿರಾ ಬಾನು, ಶಮೀಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಇತ್ತೀಚಿಗಷ್ಟೇ ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ರಕ್ಷಿತ್ ಶಿವರಾಂ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಮೊದಲಾದ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.









