






ಧರ್ಮಸ್ಥಳ: ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ನವದುರ್ಗೆಯರ ದಿವ್ಯ ಸಾನಿಧ್ಯದಲ್ಲಿ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸ್ವಾಮಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಉಪಸ್ಥಿತಿಯಲ್ಲಿ ಅ. 11ರಿಂದ ಅ.20ರವರೆಗೆ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.


ಅ. 11ರಂದು ಶೈಲಪುತ್ರಿ ದೇವಿ ಹಾಗೂ ಅನ್ನಛತ್ರ ಶ್ರೀ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ, ಅ. 12 ರಂದು ಬ್ರಾಹ್ಮೀಣಿ ದೇವಿಗೆ, ಅ. 13ರಂದು ಚಂದ್ರಘಂಟಾ ದೇವಿಗೆ, ಅ. 14ರಂದು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ದುರ್ಗಾ ಪೂಜೆ, ಅ.15 ರಂದು ಸ್ಕಂದಮಾತಾ ದೇವಿಗೆ ಅ. 16 ಕಲ್ಯಾಣಿ ದೇವಿಗೆ, ಅ. 17 ಕಾಳರಾತ್ರಿ ದೇವಿಗೆ, ಅ. 18 ಮಹಾಗೌರಿ ದೇವಿಗೆ ಅ. 19ರಂದು ಸಿದ್ಧಿಧಾತ್ರಿ ದೇವಿಗೆ ಹಾಗೂ ಶ್ರೀದುರ್ಗಾ ಪರಮೇಶ್ವರಿ ವಿಶೇಷ ಪೂಜೆ, ಚಂಡಿಕಾ ಹೋಮ, ಅ. 20ರಂದು ಆಯುಧ ಪೂಜೆ, ಅ. 21 ರಂದು ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.









