ಉಡುಪಿಯ ದಿ ಒರಿಜಿನಲ್ ಆಭರಣ ಸಂಸ್ಥೆಯ ʻಅವಿನಾಭಾವ’ ಕಲೆಕ್ಷನ್ ಇದೀಗ ಬೆಳ್ತಂಗಡಿಯಲ್ಲಿ!

0

ಬೆಳ್ತಂಗಡಿ: ಆಭರಣ ಎಂದರೆ ಕೇವಲ ಆಭೂಷಣವಲ್ಲ, ಅದು ಸೌಂದರ್ಯ, ಕರಕುಶಲತೆ ಮತ್ತು ವೈಯಕ್ತಿಕ ಅಭಿರುಚಿಯ ಸುಂದರ ಅಭಿವ್ಯಕ್ತಿ. ಇದೇ ಪರಿಕಲ್ಪನೆಯನ್ನು ಮತ್ತಷ್ಟು ವೈಭವಯುತವಾಗಿ ಅನುಭವಿಸುವ ಅವಕಾಶವನ್ನು ಉಡುಪಿಯ ದಿ ಒರಿಜಿನಲ್ ಆಭರಣ, ಈಗ ಬೆಳ್ತಂಗಡಿಯ ತನ್ನ ಅಧಿಕೃತ ಮಳಿಗೆಯಲ್ಲಿ ಕಲ್ಪಿಸಿದೆ.ʻ

ಭರಣಿ’, ಮಾರಿಗುಡಿ ಸಮೀಪ, ಮುಖ್ಯ ರಸ್ತೆ, ಬೆಳ್ತಂಗಡಿಯಲ್ಲಿರುವ “ದಿ ಒರಿಜಿನಲ್ ಆಭರಣ” ಮಳಿಗೆಯಲ್ಲಿ ಅಕ್ಟೋಬರ್ 8 ಮತ್ತು 9, 2026ರಂದು ಎರಡು ದಿನಗಳ ವಿಶಿಷ್ಟ ‘ಅವಿನಾಭಾವ’ ಕಲೆಕ್ಷನ್‌ನ ವಿಶೇಷ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಈ ವಿಶೇಷ ಸಂದರ್ಭದಲ್ಲಿ ‘ಅವಿನಾಭಾವ’ ಕಲೆಕ್ಷನ್‌ನ ಆಭರಣ ಕೊಂಡಾಗ 0% ಮೇಕಿಂಗ್ ಚಾರ್ಜ್ ನ ವಿಶೇಷ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.ʻಅವಿನಾಭಾವ’ ಕಲೆಕ್ಷನ್ ತನ್ನ ವಿನ್ಯಾಸದ ಸೂಕ್ಷ್ಮತೆ, ಕಲಾತ್ಮಕ ಸಮತೋಲನ ಮತ್ತು ನಿಖರ ಕರಕುಶಲತೆಗಾಗಿ ವಿಶಿಷ್ಟ ಸ್ಥಾನ ಪಡೆದಿದೆ. ಭಾರತೀಯ ಆಭರಣ ಪರಂಪರೆಯ ಸೊಗಡನ್ನು ಆಧುನಿಕ ಅಭಿರುಚಿಯೊಂದಿಗೆ ಸಂಯೋಜಿಸುವ ಈ ಕಲೆಕ್ಷನ್‌ನಲ್ಲಿ, ವಿಶೇಷ ಸಂಭ್ರಮಗಳ ವೈಭವದಿಂದ ಹಿಡಿದು ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುವ ಆಯ್ಕೆಗಳವರೆಗೆ ವೈವಿಧ್ಯಮಯ ವಿನ್ಯಾಸಗಳನ್ನು ಕಾಣಬಹುದು.

ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.((ಬಾಕ್ಸ್))”ದಿ ಒರಿಜಿನಲ್ ಆಭರಣ” ಸಂಸ್ಥೆಯ ಕುರಿತು1935ರಲ್ಲಿ ಸ್ಥಾಪನೆಯಾದ ಉಡುಪಿಯ “ದಿ ಒರಿಜಿನಲ್ ಆಭರಣ” ಒಂಬತ್ತು ದಶಕಗಳಿಗೂ ಹೆಚ್ಚಿನ ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿದೆ. ವಿಶ್ವಾಸ, ಭರವಸೆ, ಕರಕುಶಲತೆ ಮತ್ತು ಭಾರತೀಯ ಆಭರಣ ಪರಂಪರೆಯ ಆಳವಾದ ಅರಿವಿನೊಂದಿಗೆ ಬೆಳೆದಿರುವ ಸಂಸ್ಥೆ, ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳಲ್ಲಿ ವೈವಿಧ್ಯಮಯ ವಿನ್ಯಾಸಗಳನ್ನು ನೀಡುತ್ತದೆ.

ಕರಕುಶಲತೆಯ ಶ್ರೇಷ್ಠತೆ ಮತ್ತು ಉನ್ನತ ಗ್ರಾಹಕ ಅನುಭವಕ್ಕೆ ಆದ್ಯತೆ ನೀಡುತ್ತಾ, “ದಿ ಒರಿಜಿನಲ್ ಆಭರಣ” ತನ್ನ ಶ್ರೀಮಂತ ಪರಂಪರೆಯನ್ನು ಸಮಕಾಲೀನ ಅಭಿರುಚಿಯೊಂದಿಗೆ ತಾಳಮೇಳೈಸಿ ನಿರಂತರವಾಗಿ ತನ್ನ ಪ್ರಬುದ್ಧ ಸ್ಥಾನಮಾನವನ್ನು ಮತ್ತಷ್ಟು ಸಶಕ್ತಗೊಳಿಸಿದೆ. ಕರ್ನಾಟಕ ಮತ್ತು ಗೋವಾದ ಒಟ್ಟು 8 ಜಿಲ್ಲೆಗಳಾದ್ಯಂತ 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ʻದಿ ಒರಿಜಿನಲ್ ಆಭರಣ, ಉಡುಪಿ’ ತನ್ನ ಉಪಸ್ಥಿತಿಯನ್ನು ಹೊಂದಿದೆ.

ಇವರ ಅತ್ಯಂತ ಹೊಸದಾದ ಮತ್ತು ಬೆಂಗಳೂರಿನ ಏಕೈಕ ಅಧಿಕೃತ ಮಳಿಗೆಯು ಜಯನಗರದ 5ನೇ ಬ್ಲಾಕ್‌ನಲ್ಲಿದೆ.

LEAVE A REPLY

Please enter your comment!
Please enter your name here